” ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ₹3,000 ಬೆಲೆಯ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಘೋಷಣೆ”

ಬೆಂಗಳೂರು :–

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ₹3,000 ಬೆಲೆಯ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಘೋಷಣೆ ಮಾಡಿದರು. ಹೊಸ ಉಪಕ್ರಮವು ಆಗಸ್ಟ್ 15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಇದು ಸಕ್ರಿಯಗೊಳಿಸಿದ ದಿನಾಂಕದಿಂದ 1 ವರ್ಷ ಅಥವಾ 200 ಟ್ರಿಪ್‌ಗಳಿಗೆ ಮಾನ್ಯ ವಾಗಿರುತ್ತದೆ. ಈ ಪಾಸ್ ವಾಣಿಜೇತರ ಖಾಸಗಿ ವಾಹನಗಳಿಗೆ ಮಾತ್ರ ಎಂದು ಗಡ್ಕರಿ ತಿಳಿಸಿದರು.

ರಾಜಮಾರ್ಗ ಯಾತ್ರಾ ಆ್ಯಪ್ ಮೂಲಕ ವಾರ್ಷಿಕ ಪಾಸ್‌ ಪಡೆಯಬಹುದು.

Share this post:

Leave a Reply

Your email address will not be published. Required fields are marked *