ಬೆಂಗಳೂರು :–
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಗೂ ಬ್ಲ್ಯಾಕ್ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಇಬ್ಬರು ಸ್ಟಿಂಗ್ ಆಪರೇಷನ್ ಸಂಚು ಮಾಡಿ “ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು” ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಸಂಚು ರೂಪಿಸಿದ ಡಿ.ಕೆ.ಶಿವಕುಮಾರ್ ಸಿಂಡಿಕೇಟಿನಲ್ಲಿ ಇದ್ದ ಎಲ್ಲರನ್ನು ಬಂಧಿಸಬೇಕು ಹಾಗೂ ಈ ಮುಖ್ಯಮಂತ್ರಿಯನ್ನು ‘ಕರ್ನಾಟಕದ ಸ್ಟಿಂಗ್ ಸಾಮ್ರಾಟ್ ‘ ಎಂದು ಕರೆಯಬೇಕು ಎಂದರು.




