ಬೆಂಗಳೂರು :–
ಕರ್ನಾಟಕ ರಾಜ್ಯದ ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು 9ರಿಂದ 10 ಗಂಟೆಗೆ ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿ.
ರಾಜ್ಯ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಪ್ರಕಾರ, ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು, ಗರಿಷ್ಠ ಓಟಿ 10 ಗಂಟೆ ಮೀರಬಾರದು ಎಂಬ ನಿಯಮವಿದೆ.
ಆದರೆ, ಗರಿಷ್ಠ ಸಮಯವನ್ನು 10 ಗಂಟೆಗೆ ಮತ್ತು ಗರಿಷ್ಠ ಓ ಟಿ ಯನ್ನು 12 ಗಂಟೆ ಏರಿಕೆ ಮಾಡಿ, ವಾರದಲ್ಲಿ 2 ದಿನ ರಜೆ ನೀಡುವ ಯೋಚನೆ ಯಲ್ಲಿದೆ ಎಂದು ವರದಿ ಹೇಳಿದೆ.