ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಸ್ಥಳೀಯ ಕೆ. ಎಲ್. ಇ ಸಂಸ್ಥೆಯ ಚಿದಾನಂದ ಬಿ. ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯದಲ್ಲಿ “ಇಂಡಕ್ಷನ್ ಪ್ರೋಗ್ರಾಂ” ನಿಮಿತ್ತ ಹತ್ತನೇ ದಿನದ ಕಾರ್ಯಕ್ರಮದ ಅಂಗವಾಗಿ “ಡ್ರಗ್ ಎಡಿಶನ್ಸ್, ಡ್ರಗ್ ಫೆಡ್ಲಿಂಗ್ ಮತ್ತು ಅಲ್ಕೋಹಾಲಿಸಂ” ವಿಷಯವಾಗಿ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ. ಎಚ್. ಎಫ್. ನಿಂಗರೆಡ್ಡಿ, ಅಬಕಾರಿ ನಿರೀಕ್ಷಕರು, ಚಿಕ್ಕೋಡಿ ವಲಯ ಇವರು ದುಶ್ಚಟಗಳಿಂದ ಆಗುವ,
ಅನುಭವಿಸುವ ನರಕ ಯಾತನೆಗಳ ಬಗ್ಗೆ ನೈಜ ಘಟನೆಗಳ ಮೂಲಕ ವಿವರಿಸಿದರು. ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಶ್ರೀ. ರಾಜು ಎಚ್ ಗೊಂಡೆ, ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ, ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ. ಇವರು ಈಗಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜಯಿಸಲು ಅನೇಕ ಡ್ರಗ್ಸ್ಗಳನ್ನು ಬಳಸಿ ಅದನ್ನೇ ಮುಂದುವರಿಸಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡ ನಿದರ್ಶನಗಳ ಮೂಲಕ ಬಹಳ ಮಾರ್ಮಿಕವಾಗಿ ವಿವರಿಸಿದರು. ಮತ್ತೊರ್ವ ಅತಿಥಿಗಳಾದ ಶ್ರೀ. ಸುನಿಲ್ ಕುಮಾರ್ ಡಿ, ಅಬಕಾರಿ ಉಪನಿರೀಕ್ಷಕರು, ಚಿಕ್ಕೋಡಿ ಇವರು ಮಾದಕ ವಸ್ತುಗಳ ಉತ್ಪಾದನೆ, ಬಳಕೆ ಹಾಗೂ ಅವುಗಳಿಂದ ಆಗುವ ಪರಿಣಾಮಗಳ ಬಗ್ಗೆ ಪವರ್ ಪಾಯಿಂಟ್ ಪ್ರಸ್ತುತ್ತಿ ಮೂಲಕ ವಿವರಿಸಿದರು. ಸಭೆಯ ಅಧ್ಯಕ್ಷರಾದ ಪ್ರಾಂಶುಪಾಲರು ಪ್ರೊ|| ದರ್ಶನ್‌ಕುಮಾರ್ ಬಿಳ್ಳೂರ್‌ರವರು ವಿಧ್ಯಾರ್ಥಿಗಳಿಗೆ ಯಾವುದೇ ರೀತಿಯ ದುಷ್ಚಟಗಳಿಗೆ ಮಾರು ಹೊಗದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರೋ. ಬಿ. ಕೆ. ಪಾಟೀಲ ಕೋ-ಆರ್ಡಿನೆಟರ್ ಹಾಗೂ ಇನ್ನುಳಿದ ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರೋ. ಪಲ್ಲವಿ ಕುಲಕಣ ðರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಂದಿಸಿದರು.
+ There are no comments
Add yours