ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಯಾರು ಹೊಣೆ ಬೀದಿನಾಟಕ ಪ್ರದರ್ಶನ
ಇಂದಿನ ದಿನಮಾನದಲ್ಲಿ ಬೆಳೆಯುವ ಹೆಣ್ಣು ಮಕ್ಕಳು ಮೋಬೈಲ್ ವಾಟ್ಸಪ್ ಯೂಟ್ಯಬಗಳಲ್ಲಿ ಕಾಲ ಹರಣೆಮಾಡಿ ಜೀವನದ ವೆರ್ಥೆಸಮಯ ಕಳೆಯಬಾರದು ಹಾಗೇ ಅರಪಿಚಿತರ ಜೊತೆ ಮೊಬೈಲದಲ್ಲಿ ಪರಿಚಯ ಮಾಡಿಕೊಳ್ಳದೆ ತಮ್ಮ ಜೀವನದ ರಕ್ಷಣೆ ಮಾಡಲು ಜಾಗೃತವಹಿಸಬೆಕೆಂದು ಉಜ್ವಲ ಮಹಿಳೆಯರ ರಕ್ಷಣೆ ಪುರ್ಣವಸತಿಯೋಜನೆ ಸಂಸ್ಥೆ ನಿರ್ದೇಶಕರಾದ ಸುರೇಖಾ ಪಾಟೀಲ ಕಾಲೇಜು ವಿದ್ಯಾರ್ಥಿನಿಯರಿಗೆ ಕರೆನೀಡಿದರು ಅವರು ಕಳೆದ 14 ರಂದು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಸರಕಾರಿ ಪದವಿಪೂರ್ವ ಕಾಲೇಜು ಬಾಡ ಇವರ ಸಹಯೋಗದಲ್ಲಿ ಮಾನವ ಕಳ್ಳ ಸಾಗಣೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮದ ಬೀದಿನಾಟಕ ಪ್ರದರ್ಶನ ವಾದ್ಯನುಡಿಸಿ ಚಾಲನೆ ನೀಡಿ ಮಾತನಾಡಿ ಭೂಮಿಯ ಮೇಲೆ ದುಷ್ಟ್ಚಜನರು ಹೆಚ್ಚಾಗಿದ್ದಾರೆ ಹಣದ ಆಸೆಗಾಗಿ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ ರಾಜ್ಯ ಹೋರ ರಾಜ್ಯಗಳಿಗೆ ಸಾಗಿಸಿ ಹೆಣ್ಣು ಮಕ್ಕಳ ಬಾಳಿಗೆ ಮುಳ್ಳಾಗುತ್ತಿದ್ದಾರೆ ಆದ್ದರಿಂದ ಹೆಣ್ಣು ಮಕ್ಕಳ ರಕ್ಷಣೆ ನಮ್ಮಲ್ಲೆರ ಹೋಣೆಯಾಗಿದೆ ಎಂದರು .
ಕಾಲೇಜು ಪ್ರಾರ್ಚಾಯರಾದ ಅನ್ನಪ್ಪಾ ಡಿ ಮರಾಠೆ ಇವರು ಮಾತನಾಡಿ ಮೋಹದ ಆಸೆಗಳಿಗೆ ಶೋಕಿ ಜೀವನ ನಡೆಸದೆ ಇಂದಿನ ಯುವ ಜನರು ಕಲಿಯುವ ವಯಸ್ಸಿನಲ್ಲಿ ಶ್ರಧ್ದೆ ನಿಷ್ಠೆಯಿಂದ ಶಿಕ್ಷಣ ಕಲಿತು ಸದೃಢ ಅರೋಗ್ಯದಿಂದ ದುಷ್ಟಶಕಿಗಳನ್ನು ದೂರ ಮಾಡಿ ಛಲದಿಂದ ಬದುಕಬೆಕೆಂದರು ರಂಗದರ್ಶನ ಕಲಾತಂಡ ಧುಳಗನವಾಡಿ ಇವರು “ಯಾರು ಹೊಣೆ” ಬೀದಿನಾಟಕ ಜಾಗೃತಿ ಹಾಡುಗಳ ಮುಖಾಂತರ ಹೆಣ್ಣು ಮಕ್ಕಳ ಮಾರಾಟ ತಡೆಯುವದು ಬಾಲ್ಯ ವಿವಾಹ ತಡೆ ಹೆಣ್ಣಿನ ಶೋಷಣೆ ತಡೆಯುವಂಥ ಕಲಾತ್ಮಕ ಪ್ರದರ್ಶನ ನೀಡಿ ಕಾಲೇಜು ಯುವ ಜನರಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಮೆಹಬೂಬು ಮುಲ್ಲಾ, ರಾಜಶೇಖರ ಸತ್ತಿಗೇರಿ ವಿದ್ಯಾಶ್ರೀ ಹೋಳೆಪ್ಪಗೋಳ ಭರತ ಕಲಾಚಂದ್ರ ಉಪಸ್ಥಿತರಿದ್ದರು. ಉಪನ್ಯಾಸಕಿ ಅಶ್ವಿನಿ ಕಾಂಬಳೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಸ್ನೇಹಾ ಲಾಯನದಾರ ವಂದಿಸಿದರು. ಕಲಾತಂಡದವರು ಯಾದಗೂಡ, ಬೆಳವಿ, ಯರಗಟ್ಟಿ, ಬಸ್ತವಾಡ ಗ್ರಾಮಗಳಲ್ಲಿ ಕಲಾ ಪ್ರದರ್ಶನ ನೀಡಿ ಅರಿವು ಮೂಡಿಸಿದರು.
ಕೇರೂರದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ
ಚಿಕ್ಕೋಡಿ: ಮನುಷ್ಯನ ಜೀವನ ಹಸನಮಾಡುವದು ಸತ್ಸಂಗದಲ್ಲಿ ಬೆರೆತಾಗ ಪ್ರವಚನ ಶಾಸ್ತ್ರ ಕೇಳುವದರಿಂದ ಭವಬಂಧನ ದೂರವಾಗಿ ಆತ್ಮ ಸಾಕ್ಷಾತಕಾರವಾಗಿ ಮನಸ್ಸಿಗೆ ಪರಮಾನಂದ ಸಿಗುತ್ತದೆ. ಅಂತಹ ಶಿವಶರಣರ ದರ್ಶನ ಪಡೆದು ಶರಣರ ಅಮೃತ ವಾಣಿ ಆಸ್ವಾದಿಸಿ ಜೀವನ ಧನ್ಯಮಯವಾಗಿ ಮಾಡಿ ಬದುಕುಸಾಗಿಸಬೇಕೇಂದು ಶರಣ ಶ್ರೀ ಕೇದಾರಿಗೌಡಾ ಪಾಟೀಲ ಇವರು ಸದ್ದಭಕ್ತರಿಗೆ ಕರೆನೀಡಿದರು ಅವರು ಚಿಕ್ಕೋಡಿ ಸಮೀಪದ ಕೇರೂರದ ಶ್ರೀ ಸದ್ಗುರು ಜ್ಯೋರ್ತಿಲಿಂಗ ಸೇವಾ ಸಮಿತಿ ಇವರ ಅಶ್ರಯದಲ್ಲಿ ಶ್ರಾವನ ಮಾಸದ ಅಂಗವಾಗಿ ತಿಂಗಳ ಪರಿಯಂತ ನಡೆದುಕೊಂದು ಬಂದ ಪ್ರವನಚ ಕಳೆದ ದಿನಾಂಕ 14 ಸಪ್ಟೆಂಬರ್ 2023 ಸದ್ಗುರು ಜ್ಯೋತಿ ಗ್ರಂಥ ಮಾಲಿಕೆ ಪ್ರಚನ ಹಿತೋಪದೇಶ ನೀಡಿ ಮಾತನಾಡಿದರು.
ಅಥಿತಿಗಳಾಗಿ ಆಗಮಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಭರತ ಕಲಾಚಂದ್ರ ಮಾತನಾಡಿ ನಮ್ಮ ನಾಡಿನ ಅದ್ಯಾತ್ಮೀಕ ಸಾಂಸ್ಕೃತೀಕ ಪರಂಪರೆ ಉಳಿಸುವಲ್ಲಿ ಹಿಂದಿನ ಶರಣರು ವಚನಗಳನ್ನು ತತ್ವಪದಗಳನ್ನು ಕಲಾವಿದರಿಗೆ ಕೊಡುಗೆ ನೀಡಿದ್ದಾರೆ ಇವಗಳನ್ನು ಕೇಳುವದರಿಂದ ಮನಸ್ಸಿಗೆ ಹೀತನೀಡುವದರ ಜೊತೆಗೆ ನಮ್ಮನ್ನು ಭಕ್ತಿಯ ಮಾರ್ಗದ ಕಡೆಗೆ ಕರೆದುಕೊಂಡು ಹೊಗುತ್ತದೆ ಎಂದು ಹೇಳಿದರು ಲಿಂಗೈಕ್ಯ ಜ್ಯೋರ್ತಿಲಿಂಗ ಮಾಹಾರಾಜರು ತಮ್ಮ ಜೀವನದೂದ್ದಕ್ಕೂ ಶಾಸ್ತ್ರಹೇಳುವದರ ಜೊತೆಗೆ ಸತ್ಸಂಗದಲ್ಲಿ ಕಾಲ ಕಳೆದರೆಂದು ಬಣ್ಣಿಸಿದರು.
ಕೇದಾರಿಗೌಡಾ ಪಾಟೀಲ ಶರಣರಿಗೆ ಅಪ್ಪಾಸಾಹೇಬ ಖೋತ ಶಾಲುಹೊದಿಸಿ ಫಲಪುಷ್ಪನೀಡಿ ಸತ್ಕರಿಸಿದರು ಕಲಾವಿದರಾದ ಶಶಿಕಾಂತ ಜಂಗ್ಗಿ ,ಮಾರುತಿ ಕಾಮಗೌಡಾ ,ಶಂಕರ ಖೋತ, ಸಂಜು ಚೌಗಲಾ ಸುಜಾತಾ ಮಗದುಮ್ಮ ಉಪಸ್ಥಿತರಿದ್ದರು.
+ There are no comments
Add yours