ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಮಿಳುನಾಡಿಗೆ ನೀರು ಬಿಡಿಸುತ್ತಿರುವ ಕಾವೇರಿ ಪ್ರಾಧಿಕಾರ ಮತ್ತು ಕೇಂದ್ರ ಸರಕಾರದ ವಿರುದ್ಧವಾಗಿ, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ. ಯಾವಾಗಲೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರದ ವಿರುದ್ಧ ಚಿಕ್ಕೋಡಿಯ ಸಂಸಧ ಕಚೇರಿ ಎದುರಿಗೆ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಸಂಜು ಬಡಿಗೇರ ಮತ್ತು ತಾಲೂಕಾಧ್ಯಕ್ಷ ನಾಗೇಶ ಮಾಳಿ ಇವರ ನೇತೃತ್ವದಲ್ಲಿ ಬ್ರಹತ್ತ ಪ್ರತಿಭಟನೆ ನಡೆಸಲಾಯಿತು, ಸಂಜು ಬಡಿಗೇರ ಮಾತನಾಡಿ ಕನ್ನಡ ನಾಡಿನ ವಸ್ತು ಸ್ಥಿತಿ ಅರಿಯದೇ ಕಾವೇರಿ ನೀರು ತಮಿಳರಿಗೆ ಬಿಡಲು ಆದೇಶಿಸಿದ ನೀರು ಮಂಡಳಿಯ ನಿರ್ಣಯ ಖಂಡನೀಯದಾಗಿದೆ ಇದನ್ನು ನಾವು ಧಿಕ್ಕರಿಸುತ್ತೇವೆ ಎಂದು ಹೇಳಿದರು, ನಾಗೇಶ ಮಾಳಿ ಮಾತನಾಡಿ
ಕನ್ನಡದ ೨೮ ಸಂಸಧರು ಕನ್ನಡ ಪರ ಕೆಲಸ ಮಾಡಲು ವಿಫಲರಾಗಿದ್ದಾರೆ, ಪ್ರಧಾನ ಮಂತ್ರಿ ಇವರು ಮದ್ಯ ಪ್ರವೇಶಿಸಿ ವಾಸ್ತುಸ್ಥಿತಿ ತಿಳಿಯುವ ಅವಶ್ಯಕತೆ ಇದೆ ಎಂದು ಹೇಳಿದರು, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ನಮ್ಮ ನಾಡಿನ ಸಂಸಧರು ವಿಫಲರಾಗಿದ್ದಾರೆ ಕನ್ನಡ ದ ಬಗ್ಗೆ ಒಲವು ತೋರದೆ ಹಿಂದಿಗಳ ಪರ ಕಾರ್ಯ ಮಾಡುತ್ತಿದ್ದಾರೆ ಇದು ನಮ್ಮ ಕನ್ನಡಿಗರ ದುರ್ಭಾಗ್ಯವಾಗಿದೆ, ಒಂದು ವೇಳೆ ಕಾವೇರಿಯ ವಿಷಯದಲ್ಲಿ ಕನ್ನಡಿಗರಿಗೆ ನ್ಯಾಯ ಸಿಗದೇ ಇದ್ದರೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ,
ಈ ಸಂಧರ್ಭದಲ್ಲಿ ಕನ್ನಡ ಪರ ಹೋರಾಟಗಾರರು ಆದ, ಸಿದ್ಧು ವಡೇಯರ, ರಮೇಶ ಕರನೂರೆ, ಬಸವರಾಜ ಸಾಜನೆ, ರಫೀಕ್ ಪಠಾಣ, ಕಪೀಲ ಕಮತೆ, ಖಾನಪ್ಪಾ ಬಾಡಕರ, ಹಾಲಪ್ಪಾ ಬಾನಸೆ, ಶ್ರೀಕಾಂತ ಅಸೋದೆ, ಚನ್ನಪ್ಪಾ ಬಡಿಗೇರ, ಸತ್ಯಪ್ಪಾ ಕಾಂಬಳೆ, ದುಂಡಪ್ಪಾ ಚೌಗಲಾ, ರಾಜು ಪಾಟೀಲ ಸೇರಿದಂತೆ ನೂರಾರು ಜನ ಕನ್ನಡಪರ ಕಾರ್ಯಕರ್ತರು ಉಪಸ್ಥಿತರಿದ್ದರು.
+ There are no comments
Add yours