“ಈ ನಾಲ್ಕು ತಿಂಗಳ ಅವಧಿಯಲ್ಲಿಯೇ ರಾಜ್ಯದ ರೈತರು ಭಿಕ್ಷೆ ಬೇಡುವ ದುಸ್ಥಿತಿ ಬಂದಿದ್ದು”-ಶ್ರೀಮಂತ ಪಾಟೀಲ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

ಈ ನಾಲ್ಕು ತಿಂಗಳ ಅವಧಿಯಲ್ಲಿಯೇ ರಾಜ್ಯದ ರೈತರು ಭಿಕ್ಷೆ ಬೇಡುವ ದುಸ್ಥಿತಿ ಬಂದಿದ್ದು, ರೈತರ ಉಳಿವಿಗಾಗಿ ಅಕ್ಟೋಬರ್ 16 ಸೋಮವಾರ ಮುಂಜಾನೆ 10 ಗಂಟೆಗೆ ಜಿಲ್ಲೆಯ ಕಾಗವಾಡ ತಹಶೀಲ್ದಾರ ಕಛೇರಿ ಆವರಣದಲ್ಲಿ ಸಾವಿರಾರು ರೈತರೊಂದಿಗೆ ಹೋರಾಟ ಮಾಡಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಗುವುದು ಎಂದು

“ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು”.

ಬೆಳಗಾವಿ ಜಿಲ್ಲೆಯ ಅಥಣಿ ಶುಗರ್ಸ ಆವರಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ದಿನಕ್ಕೆ ಒಂದು ಗಂಟೆಯೂ ಕೂಡ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಇದರ ಪರಿಣಾಮ ಕಷ್ಟ ಪಟ್ಟು ಗುಂಪು ಏತ ನೀರಾವರಿ ಯೋಜನೆಗಳ ಮೂಲಕ ಕೃಷ್ಣಾ ನದಿಯಿಂದ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.

ಹೀಗಾಗಿ ಕಾಗವಾಡ ಕ್ಷೇತ್ರದ ರೈತರು ಆತ್ಮಹತ್ಯೆ ಮಾಡಿಕೊಂಡರು ಕೂಡ ಆಶ್ಚರ್ಯ ಪಡಬೇಕಿಲ್ಲ ಎಂದ ಅವರು ಕಾಗವಾಡ ಕ್ಷೇತ್ರದ ರೈತರು ಈ ಸರಕಾರದ ಈ ನಡೆಗೆ ಬೇಸತ್ತು ಉದ್ಯೋಗ ಅರಸಿ ಗುಳೆ ಹೊರಟಿದ್ದು, ಈ ಸಂಕಷ್ಟ ಸ್ಥಿತಿಯಿಂದ ಹೊರ ಬರಲು ಕನಿಷ್ಠ 7 ತಾಸು ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಬರಗಾಲದ ಈ ಸ್ಥಿತಿಗೆ ಬೇಸತ್ತು ಕಾಗವಾಡ ಮತಕ್ಷೇತ್ರದ ಸಂಬರಗಿ ಗ್ರಾಮದ ರೈತನೋರ್ವ ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದು, ಇದೇ ರೀತಿ ಮುಂದುವರೆದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ.

ಕಾಗವಾಡ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಅಧಿಕಾರವಧಿತಲ್ಲಿ ಅನುಷ್ಠಾನಗೊಂಡ ಕೇಂದ್ರದ ಜಲಜೀವನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ನೂರಾರು ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸ್ಥಗಿತಗೊಂಡ ಪರಿಣಾಮ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಅಂತಿಮ ಹಂತ ತಲುಪಿದ್ದ ಖಿಳೇಗಾಂವ ಬಸವೇಶ್ವರ ಯೋಜನೆಯ ಕಾರ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದು, ಇದರಿಂದ ಕಾಗವಾಡ ಕ್ಷೇತ್ರದ 70 ಸಾವಿರ ಎಕರೆ ಭೂಮಿ ನೀರಾವರಿ ಯಿಂದ ವಂಚಿತಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಧುರೀಣರಾದ ಮಹಾದೇವ ಕೋರೆ, ತಮ್ಮಣ್ಣ ಪಾರಶೆಟ್ಟಿ, ಈಶ್ವರ ಕುಂಬಾರೆ, ಅಪ್ಪಣ್ಣಾ ಮಗದುಮ್, ರಾಕೇಶ ಪಾಟೀಲ, ರಾಜು ಚವ್ಹಾಣ, ಶಿವಾನಂದ ಮೆಣಸಿ, ವಿಠ್ಠಲ ಮಾಳಿ, ಉತ್ಕರ್ಷ ಪಾಟೀಲ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours