ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಪಟ್ಟಣದಲ್ಲಿ ರುವ ತಹಶೀಲದಾರ ಕಛೇರಿಯ ಸಂಭಾಂಗಣದಲ್ಲಿ ಬುಧವಾರ ಆಯೋಜಿಸಿದ ಬರಗಾಲ ವಿಷಯ ಕುರಿತು ಮಾನ್ಯ ಜಿಲ್ಲಾ ನೋಡಲ್ ಅಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಾನ್ಯ ತಹಶೀಲ್ದಾರಾದ ಸಿ ಎಸ ಕುಲಕರ್ಣಿ ಚಿಕ್ಕೋಡಿ ಹಾಗೂ ಇನ್ನೀತರ ಇಲಾಖೆ ಅಧಿಕಾರಿಗಳು ಹಾಜರಿದ್ದು ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ಜರುಗಿಸಿದರು.
ಸದರಿ ಸಭೆಯಲ್ಲಿ ಗ್ರಾಮವಾರು ವಿವರ ತೆಗೆದುಕೊಂಡು ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಗ್ರಾಮ ಪಂಚಾಯತಿಯ ಬೋರವೆಲ್ ಕುರಿತು, ಜೆ.ಜಿ.ಎಂ. ಕಾಮಗಾರಿ, ಎಮ್.ವ್ಹಿ.ಎಸ್. ಪೈಪಲಾಯಿಗಳ ನೀರು ಪೂರೈಕೆ, ಪಂಚಾಯತಿಯ ಟ್ಯಾಂಕರಗಳ ವಿವರ, ಈಗ ಇರುವ ಕೆರೆ ನೀರುಗಳನ್ನು ಮಿತವಾಗಿ ಬಳಸುವದು, ಹಾಗೂ ಎಲ್ಲ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಮ್ಮ ತಮ್ಮ ಗ್ರಾಮಗಳಲ್ಲಿ ನೀರನ್ನು ಮಿತವಾಗಿ ಬಳಿಸಿ ಜಾಗೃತಿ ಮಾಡಲು ಸೂಚಿಸಿದರು.
ಯಾವುದೇ ಗ್ರಾಮದಲ್ಲಿ ಸಮಸ್ಯೆ ಉಂಟಾದಲ್ಲಿ ತಕ್ಷಣವೇ ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಿದರು. ಪಶು ವೈದ್ಯಾಧಿಕಾರಿಗಳಿಗೆ ಮೇವು ಬ್ಯಾಂಕ ಬಗ್ಗೆ ತಿಳಿಸಿ ಯಾವುದೇ ಗ್ರಾಮಗಳಲ್ಲಿ ಕುಂದು ಕೊರತೆ ಆಗದಂತೆ ಅವಲೋಕಿಸಲು ಸೂಚಿಸಿದರು ಹಾಗೂ ಇತರೆ ವಿಷಯಗಳ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಆಯಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
+ There are no comments
Add yours