“ಶತಾಯುಷಿಗಳು ಮತದಾನ ಮಾಡುವುದು ಸ್ಫೂರ್ತಿಯಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ”- ಜಗದೀಶ ಕಮ್ಮಾರ

Estimated read time 1 min read
Share with Your friends

ವರದಿ ; ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

” ಮಾಂಜರಿ ಗ್ರಾಮದಲ್ಲಿ ಮತದಾನ ಜಾಗೃತಿ ಕುರಿತು ಶತಾಯುಷಿಗಳಿಗೆ ಸನ್ಮಾನ”

ಅನೇಕರು ಮತದಾನದಿಂದ ದೂರ ಉಳಿಯುವ ಸನ್ನಿವೇಶ ನಡುವೆ ಚಿಕ್ಕೋಡಿ ತಾಲೂಕಿನಲ್ಲಿರುವ ಶತಾಯುಷಿಗಳು ಮತದಾನ ಮಾಡುವುದು ಸ್ಫೂರ್ತಿಯಾಗಿದೆ. ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಗದೀಶ ಕಮ್ಮಾರ ಅವರು ತಾಲುಕಿನ

ಮಾಂಜರಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಶತಾಯುಷಿಯರಿಗೆ ಸನ್ಮಾನ ಮಾಡಿ ಮಾತನಾಡಿದರು ಮತದಾನ ಎಲ್ಲರ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕೆಂಬ ಉದ್ದೇಶದಿಂದ ಶತಾಯುಷಿಯರಾದ ದಾದು ಬಾವು ಗೋತೆ ವಯಸ್ಸು ೧೦೨ ಹಾಗೂ ಅಣ್ಣಪ್ಪಾ ಭರಮು ನರವಾಡೆ ವಯಸ್ಸು ೧೦೪ ವರ್ಷದ ಶತಾಯುಷಿಗಳು ಒಮ್ಮೆಯು ಮತದಾನ ತಪ್ಪಿಸಿರುವುದಿಲ್ಲ. ತಮ್ಮ ಈ ಇಳಿ ವಯಸ್ಸಿನಲ್ಲಿಯು ಲವಲವಿಕೆಯಿಂದ ನಿರಂತರವಾಗಿ ಮತದಾನ ಮಾಡುತ್ತ ಬಂದಿದ್ದಾರೆ. ತಾಲೂಕಿನ ಎಲ್ಲಾ ಶತಾಯುಷಿಗಳಿಗೆ ಸನ್ಮಾನದ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತದೆ. ಯಾರು ಕೂಡ ಮತದಾನದಿಂದ ಹೋರಗುಳಿಯಬಾರದು ಎಂದು ಹೇಳಿದರು.

ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ವ್ಹಿ.ಆರ್ ಪೋತದಾರ ರವರು ಮಾತನಾಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಬಾರಿ ಗ್ರಾಮದಲ್ಲಿ ೧೦೦ ರಷ್ಟು ಮತದಾನ ಮಾಡುವ ಗುರಿಯನ್ನು ಹೊಂದಲಾಗಿದೆ. ಆದ್ದರಿಂದ ಮನೆ ಮನೆಗೆ ಬೇಟಿ ನೀಡಿ ಕರ ಪತ್ರಗಳ ಹಂಚಿಕೆ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ) ಶಿವಾನಂದ ಶಿರಗಾಂವೆ ವ್ಯವಸ್ಥಾಪಕರಾದ ಉದಯಗೌಡಾ ಪಾಟೀಲ ದ್ವಿ.ದ.ಲೆ.ಸಹಾಯಕರಾದ ಶ್ರೀಮತಿ ವ್ಹಿ.ಡಿ ಕಾಂಬಳೆ ಗ್ರಾಮ ಆಡಳಿತಾಧಿಕಾರಿಗಳಾದ ಮನೋಜ ಕಾಂಬಳೆ ಐ.ಇ.ಸಿ ಸಂಯೋಜಕರಾದ ರಂಜೀತ ಕಾರ್ಣಿಕ ಆಡಳಿತ ಸಹಾಯಕರು ಅಕ್ಷಯ ಠಕ್ಕಪ್ಪಗೋಳ ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours