ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ(ಏ.25) :–
ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ 85 ವರ್ಷ ಮೇಲ್ಪಟ್ಟ ವಯೋವೃದರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕೋಡಿ ಲೋಕಸಭ ಮತಕ್ಷೇತ್ರದ ವ್ಯಾಪ್ತಿಯ 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನರಿಗೆ ಏ. 25 ರಿಂದ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿರುತ್ತದೆ. ಈ ಹಿನ್ನಲೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ಗುರುವಾರ (ಏ.25) ರಂದು ಯಮಕನಮರಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಯಮಕನಮರಡಿ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ನಿಗದಿತ ನಮೂನೆ ಭರ್ತಿ ಮಾಡುವ ಮೂಲಕ 2151 ಜನ 85 ವರ್ಷ ಮೇಲ್ಪಟ್ಟ ವಯೋವೃದ್ಧರು ಹಾಗೂ 1054 ಜನ ವಿಕಲಚೇತನರು ಸೇರಿದಂತೆ ಒಟ್ಟು 3205 ಜನರು ಮನೆಯಿಂದಲೇ ಮತದಾನಕ್ಕೆ ಒಪ್ಪಿಗೆ ನೀಡಿರುತ್ತಾರೆ.
ಕ್ಷೇತ್ರವಾರು ವಿವರ: ಅಥಣಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 253 ಜನ ಎಂಭತ್ತೈದು ವರ್ಷ ಮೇಲ್ಪಟ್ಟ, 137 ವಿಕಲಚೇತನರು, ಚಿಕ್ಕೋಡಿ-ಸದಲಗಾ 191 ಜನತ ವಯೋವೃದ್ಧರು, 95 ವಿಕಲಚೇತನರು, ಹುಕ್ಕೇರಿ ವಿಧಾನಸಭ ಮತಕ್ಷೇತ್ರ 202 ವಯೋವೃದ್ಧರು, 186 ವಿಕಲಚೇತನರು, ಕಾಗವಾಡ ವಿಧಾನಸಭಾ ಮತಕ್ಷೇತ್ರ 259 ವಯೋವೃದ್ಧರು, 132 ವಿಕಲಚೇತನರು, ಕುಡಚಿ ವಿಧಾನಸಭಾ ಮತಕ್ಷೇತ್ರ 382 ವಯೋವೃದ್ಧರು, 78 ವಿಕಲಚೇತನರು, ನಿಪ್ಪಾಣಿ ವಿಧಾನಸಭ ಮತಕ್ಷೇತ್ರ 420 ವಯೋವೃದ್ಧರು, 163 ವಿಕಲಚೇತನರು, ರಾಯಬಾಗ ವಿಧಾನಸಭಾ ಮತಕ್ಷೇತ್ರ 300 ವಯೋವೃದ್ಧರು, 127 ವಿಕಲಚೇತನರು, ಯಮಕನಮರಡಿ ವಿಧಾನಸಭ ಮತಕ್ಷೇತ್ರ 144 ವಯೋವೃದ್ಧರು, 136 ವಿಕಲಚೇತನರು ಮನೆಯಿಂದಲೆ ಮತದಾನಕ್ಕೆ ಒಪ್ಪಿಗೆ ಸೂಚಿಸಿರುತ್ತಾರೆ. ಮನೆಯಿಂದಲೆ ಮತದಾನ ಪ್ರಕ್ರಿಯೆಯು ಏ.27 ರ ವರೆಗೆ ಜರುಗಲಿದೆ.
+ There are no comments
Add yours