ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಕೊಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಕೃತ್ಯವನ್ನು ಖಂಡಿಸಿ ತಾಲುಕಿನ ಮಾಂಜರಿ ಗ್ರಾಮದಲ್ಲಿ ಬುಧವಾರ ಅಗಸ್ಟ 21 ರಂದು ಪ್ರತಿಭಟನೆ ನಡೆಸಲಾಯಿತು
ಪ್ರತಿಭಟಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಚಿಂತಕ ಸಿದ್ದಾರ್ಥ ಗಾಯಾಗೋಳ ವೈದ್ಯರ ಮೇಲೆ ನಿರಂತರ ಹಲ್ಲೆ ಹತ್ಯೆಗಳು ನಡೆಯುತ್ತಿವೆ ಸರ್ಕಾರ ಕೂಡಲೇ ಇದಕ್ಕೆ ನಿಯಂತ್ರಣ ಹಾಕಬೇಕು ಎಂದು ಅಗ್ರಹಿಸಿದರು ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಹಾಗೂ ತಾಲೂಕ ದಂಡಾಧಿಕಾರಿ ಚಿದಾನಂದ ಕುಲಕರ್ಣಿ ಅವರು ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪಾಂಡುರಂಗ ಮಾನೆ. ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಸಂಜಯ ನರವಾಡೆ,ಡಾ, ವಿಜಯಕುಮಾರ್ ಉಪಾಧ್ಯೆ , ಡಾ, ಶ್ಯಾಮ್ ಪಾಟೀಲ, ಡಾ. ರಮೇಶ್ ಖಿಚಡೆ, ಡಾ, ಜಿ.ಬಿ ಮಾನೆ, ಡಾ, ಓಂಕಾರ್ ರೋಡೆ, ಡಾ,ಲಕ್ಷ್ಮಣ್ ಪವಾರ್, ಡಾ, ವಿದ್ಯಾ ಕೋಟಿವಾಲೆ, .ನಜೂರುದ್ದೀನ್ ತರಾಳ, ರವಿಂದ್ರ ವಡವಡೆ ಹಾಗೂ ರಾಘವೇಂದ್ರ ಲಂಬುಗೋಳ. ಸೇರಿದತ್ತೆ ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿಯಿಂದ ಆರಂಭವಾದ ಪ್ರತಿಭಟನೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಹೂಸ ಬಸ್ಸ ನಿಲ್ದಾಣದಲ್ಲಿ ಮುಕ್ತಾಯಗೊಂಡಿತು.
+ There are no comments
Add yours