“ಇಂದಿನಿಂದ ದೇಶದ ಪ್ರಕೃತಿ ಪರೀಕ್ಷಾ ಅಭಿಯಾನ ಪ್ರಾರಂಭ” – ಡಾ. ಕಿರಣ ಮುತ್ನಾಳಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಇಂದಿನಿಂದ ದೇಶದ ಪ್ರಕೃತಿ ಪರೀಕ್ಷಾ ಅಭಿಯಾನ ಪ್ರಾರಂಭ- ಡಾ. ಕಿರಣ ಮುತ್ನಾಳಿ
ಭಾರತ ಸರಕಾರದ ಆಯುಷ ಸಚಿವಾಲಯವು ಇಂದಿನಿಂದ ಡಿಸೆಂಬರ್ ೨೫ ರವರೆಗೆ “ದೇಶ್ ಕಾ ಪ್ರಕೃತಿ ಪರೀಕ್ಷಣ” ರಾಷ್ಟ್ರೀಯ ಅಭಿಯಾನವನ್ನು ಪ್ರತಿ ಮನೆಗೆ ಆಯುರ್ವೇದವನ್ನು ಪರಿಚಯಿಸಿಲು ಹಮ್ಮಿಕೊಂಡಿದೆ

ಎಂದು ಪಟ್ಟಣದ ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿ ಹೇಳಿದರು.
ಅವರು ಇಂದು ಕಾಲೇಜಿನಲ್ಲಿ ಜರುಗಿದ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪ್ರತಿಯೊಬ್ಬರ ಮನುಷ್ಯನ ಸ್ವಭಾವ ಬೇರೆ ಬೇರೆಯಾಗಿದ್ದು ಅದನ್ನು ಅರ್ಥಮಾಡಿಕೊಳ್ಳಲು ಆಯುರ್ವೇದ ತತ್ವಗಳ ಆಧಾರದ ಮೇಲೆ ವ್ಯಕ್ತಿಯ ಆಹಾರ ಪದ್ದತಿ, ವ್ಯಾಯಾಮ ಶಕ್ತಿ, ಮಾನಸಿಕ ಒತ್ತಡ, ಚರ್ಮದ ಗುಣ, ಇನ್ನೀತರ ಲಕ್ಷಣಗಳ ಆಧಾರದ ಮೇಲೆ ವಾತ, ಪಿತ್ತ ಮತ್ತು ಕಫ ದೋಷಗಳ ಪ್ರಕೃತಿಯನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಈ ಪರೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನಲ್ಲಿ ಮಾಡಲಾಗುವುದು, ಇದರಲ್ಲಿ ನಾಗರಿಕರ ಮೊಬೈಲ್ ಫೋನ್‌ಗಳಲ್ಲಿ ಪ್ರಕೃತಿ ಪರೀಕ್ಷೆಯ ಅಭಿಯಾನದ ನಂತರ, ಪ್ರಕೃತಿಯ ಅನುಸಾರವಾಗಿ ಅವರು ತಮ್ಮ ಜೀವನಶೈಲಿ, ಆಹಾರ ಪದ್ಧತಿ, ಮತ್ತು ವ್ಯಾಯಾಮದ ದಿನಚರಿಗಳನ್ನು ಅಳವಡಿಸಿಕೊಂಡು ಮತ್ತು ಸುಧಾರಿತ ಯೋಗಕ್ಷೇಮಕ್ಕಾಗಿ ಆಯುರ್ವೇದವನ್ನು ಜೀವನಶೈಲಿಯಾಗಿ ಸ್ವೀಕರಿಸಲು ಸಹಕಾರಿಯಾಗಲಿದೆ. ಹಾಗೂ ಇಂದು ನಮ್ಮ ದೇಶದ ರಾಷ್ಟçಪತಿಯವರು ಸಹ ತಮ್ಮ ಪ್ರಕೃತಿಯನ್ನು ಪರಿಶೀಲಿಸಿಕೊಂಡು ಚಾಲನೆ ನೀಡಿದ್ದಾರೆ. ಅದೇ ರೀತಿ ನಮ್ಮ ಚಿಕ್ಕೋಡಿಯ ಹಾಗೂ ಸುತ್ತಮುತ್ತಲಿನ ಗ್ರಾಮದ ನಾಗರಿಕರು ಸಹ ಇದರಲ್ಲಿ ಭಾಗವಹಿಸಿ ಅಭಿಯಾನವನ್ನು ಯಶ್ವಸಿಗೊಳಿಸಬೇಕೇಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ ಬಿ ಬಿ ದೇಸಾಯಿ, ಪ್ರೊ ಸುದೀಂದ್ರ ಹೊನವಾಡ, ಪ್ರೊ ಸುದರ್ಶನ ಭಟ್ಟ ಹಾಗು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ತಮ್ಮ ಪ್ರಕೃತಿಯನ್ನು ಪರಿಶೀಲಿಸಿಕೊಂಡರು ಡಾ. ರೀನಾ ಹೊನವಾಡ ಕಾರ್ಯಕ್ರಮ ನಿರೂಪಿಸಿದರು.


Share with Your friends

You May Also Like

More From Author

+ There are no comments

Add yours