ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಪಟ್ಟಣದ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಚಿಕ್ಕೋಡಿಯಲ್ಲಿ “ಸಂವಿಧಾನ ದಿನ”ವನ್ನು ಆಚರಿಸಲಾಯಿತು.
ದಿನಾಂಕ: ೨೬.೧೧.೨೦೨೪ ರಂದು “ಸಂವಿಧಾನ ದಿನ”ದ ಅಂಗವಾಗಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಾಬಾಸಾಹೇಬ ಅಂಬೇಡ್ಕರ ರವರ ಭಾವ ಚಿತ್ರಕ್ಕೆ ಡಾ|| ಸುಕುಮಾರ ಭಾಗಾಯಿ ತಾಲೂಕಾ ಆರೋಗ್ಯಾಧಿಕಾರಿಗಳು ಪೂಜೆ ಸಲ್ಲಿಸಿ ಮಾತನಾಡಿ ೧೯೪೯ ರ ನವೆಂಬರ್ ೨೬ ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು.
ಇದರ ಅಂಗವಾಗಿಯೇ ನಾವು ಇಂದು ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ.ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ|| ಗೋವಿಂದ ಉಪ್ಪಾರ ಡಾ|| ಗೀತಾ ನೀಲಜಗಿ ಚಿದಾನಂದ ಕಲಾದಗಿಮಠ, ರಾಜು ದತ್ತವಾಡೆ, ಸಿದ್ದೇಶ್ವರ ಬ್ಯಾಕುಡ, ಸುವರ್ಣಾ ಪ್ರಧಾನ, ಜಯಶೀಲಾ ಡಿ ಸಾಗರ ಗಡ್ಕರಿ ನಿರಂಜನ ಬೀಮನಾಯ್ಕ ಶರಣು ಲಬ್ಬಿ ಜಿ.ಜಿ ಮುಲ್ಲಾ ಕುಮಾರ ಚೌಗಲಾ ಸುನೀಲ ಅರಂಆವಿ ಪ್ರವೀಣ ಪಾಟೀಲ ಗಣೇಶ ಕುದನೋರೆ, ಇತರರು ಉಪಸ್ಥಿತರಿದ್ದರು.
+ There are no comments
Add yours