“ವೃತ್ತಿಯಲ್ಲಿ ಪ್ರಾಮಾಣಿಕ ಬದ್ಧತೆ ಇರಬೇಕು”: ಸರೋಜಿನಿ ಕುಂದರಗಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–

ಶಿಕ್ಷಕರಾದವರು ಬೋಧನೆಯಲ್ಲಿ ತಪ್ಪದೆ ಬೋಧನ ಉಪಕರಣಗಳನ್ನು ಉಪಯೋಗಿಸಿಕೊಂಡು ಮೌಲ್ಯ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಕೊಡಬೇಕು. ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿವೆ ಅದಕ್ಕಾಗಿ ಶಿಕ್ಷಕರಾದವರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕವಾದ ಭದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಬೊಂಬಲ್ವಾಡ ಗೌತಮ ಸಿದ್ಧಾರ್ಥ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸರೋಜಿನಿ ಕುಂದರಗಿಯವರು ಇತ್ತೀಚಿಗೆ ಚೌಸನ್ ಶಿಕ್ಷಣ ಮಾಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚಿಕ್ಕೋಡಿ ತಾಲೂಕಿನಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಶಾಲೆಗಳು ಮತ್ತು ಬಿಎಡ್ ಕಾಲೇಜುಗಳ ಪಾತ್ರದ ಈ ಈ ವಿಷಯದ ಬಗ್ಗೆ ಒಂದು ದಿನ ಕಾರ್ಯಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪ್ರೀತಿಯಿಂದ ಕಂಡು ಅವರ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ
ಡಾ. ಆನಂದ್ ಮೂರ್ತಿ ಕುಲಕರ್ಣಿ ಪ್ರಾಂಶುಪಾಲರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ ಇವರು ಮಾತನಾಡಿ ಶಿಕ್ಷಕರಾದವರು ತಮ್ಮ ತರಗತಿಯಲ್ಲಿ ತಂತ್ರಜ್ಞಾನವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಓದುವ ಹವ್ಯಾಸ ಬೆಳೆಸಿದಾಗ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಾಧ್ಯವೆಂದರು.
ಡಾ. ಕನಕಾಚಲ ಕನಕಗಿರಿ ಯವರು ಒಂದು ದಿನದ ಕಾರ್ಯಕ್ರಮದ ಮುಖ್ಯ ಉದ್ದೇಶಗಳು ಹಾಗೂ ಅದರ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು
ಡಾ‌.ಎನ್.ಎಸ್. ಶಿಂದೆ ಸ್ವಾಗತ ಹಾಗೂ ಅತಿಥಿಗಳ ಪರಿಚಯ ಮಾಡಿದರು
ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಕೀರ್ತಿ ಮಗೆಣನವರ. ಸಂತೋಷ್. ಶಿಲ್ಪ ದೊಡ್ಮನಿ ಕಾರ್ಯಾಗಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ಪ್ರಶಿಕ್ಷಣಾರ್ಥಿಯಾದ ಸುನೀತಾ ಕುಬ್ಸದ್ ಪ್ರಾರ್ಥನ ಗೀತೆ ಹಾಡಿದರು. ಶಿವಲೀಲಾ ತಂಡದವರು ಸ್ವಾಗತ ಗೀತೆ ಹಾಡಿದರು ಕಾರ್ಯಕ್ರಮದಲ್ಲಿ ಪ್ರೊಫೆಸರ್ ರಾಹುತಪ್ಪ ಎಮ್ ಎಚ್ ಉಪಸ್ಥಿತರಿದ್ದರು. ಪ್ರಿಯಾಂಕ ಸಿಂಗಾಯಿ ಮತ್ತು ವೈಶಾಲಿ ಗಿರಿ ಮಲ್ಲನವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಧ್ಯಾಪಕರಾದ ಪ್ರೊಫೆಸರ್ ಎಸ್ ಎಂ ಚಂದ್ರಗಡೆ ವಂದಿಸಿದರು


Share with Your friends

You May Also Like

More From Author

+ There are no comments

Add yours