ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೊಡಿ :–
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಡಿಸೆಂಬರ್ 2022ರಲ್ಲಿ ನಡೆಸಿದ 2022-23 ನೇ ಸಾಲಿನಲ್ಲಿ ಬಿ.ಇಡಿ ದ್ವಿತೀಯ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು ಇಲ್ಲಿನ ಚೌಸನ್ ಶಿಕ್ಷಣ ಮಾಹಾವಿದ್ಯಾಲಯದ ಬಿ.ಎಡ ವಿದ್ಯಾರ್ಥಿಗಳು ಶೇಕಡ 96 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿದಾರೆ.ಹಾಗೆಯೇ ಪ್ರತಿಶತ 90ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿಉತ್ತೀರ್ಣರಾಗಿದ್ದಾರೆ ಹಾಗೂ ಪ್ರತಿಶತ 06 ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ
ಬಿ.ಎಡ ವಿದ್ಯಾರ್ಥಿಗಳಾದ ಅಕ್ಷತಾ ಗಿರಿಸಾಗರ್ ಶೇಕಡ 89.% ರಷ್ಟು ಅಂಕಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಸಂಕೇತ್ ಮನ್ಯಾಳ ಶೇಕಡ 85.33% ದ್ವಿತೀಯ ಸ್ಥಾನ. ಸುನಿತಾ ದುರ್ಗಾಯಿ ಶೇಕಡ 84.17% ತೃತೀಯ ಸ್ಥಾನ . ಜ್ವಾಲಾಮಾಲಿನಿ ಶೇಕಡ 84% 4ನೇ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸುರೇಂದ್ರನಾಥ್ .ಟಿ.ಚೌಗುಲೆ ಸಂಸ್ಥೆಯ ಚೇರ್ಪರ್ಸನ್ ರಾದ ಶ್ರೀಮತಿ ಶಕುಂತಲಾ .ಟಿ ಚೌಗುಲೆ ಮಾಜಿ ಶಾಸಕರು. ಪ್ರಾಂಶುಪಾಲರಾದ ಡಾಕ್ಟರ್ ತನುಜಾ ಎಸ್ ಕುಮಾರ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
+ There are no comments
Add yours