“ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಕೇಳಿ ಬರುವ ವಿಕಲಚೇತನರಿಗೆ ಉದ್ಯೋಗ ಚೀಟಿ ವಿತರಿಸಿ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಅವರಲ್ಲಿ ಆತ್ಮಸ್ಥರ್ಯ್ ತುಂಬುವ ಕೆಲಸ ಮಾಡಿದೆ”- ನಿಂಗಪ್ಪ ಮಸಳಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಕೇಳಿ ಬರುವ ವಿಕಲಚೇತನರಿಗೆ ಉದ್ಯೋಗ ಚೀಟಿ ವಿತರಿಸಿ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಅವರಲ್ಲಿ ಆತ್ಮಸ್ಥರ್ಯ್ ತುಂಬುವ ಕೆಲಸ ಮಾಡಿದೆ ಎಂದು ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಿಂಗಪ್ಪ ಮಸಳಿ ಹೇಳಿದರು.

ಸೋಮವಾರ ತಾಲ್ಲೂಕ ಪಂಚಾಯತ ಸಭಾ ಭವನದಲ್ಲಿ ವಿಕಲಚೇತನರ ಹಾಗೂ ಪುನರ್ವಸತಿ ಕಾರ್ಯಕರ್ತರ ಒಂದು ದಿನ ಕಾರ್ಯಾಗಾರದಲ್ಲಿ ಮಾತನಾಡಿದರು ೧೮ ವರ್ಷದ ಮೇಲ್ಪಟ್ಟ ವಿಕಲಚೇತನರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ನೀಡಿ ಅವರ ಶಕ್ತಿ ಸಾಮರ್ಥ್ಯಗಳಿಗೆ ಅನುಗುಣವಾಗಿ ಕೂಲಿ ಕೆಲಸ ನೀಡಲಾಗುತ್ತದೆ ಹಾಗೂ ೨೦೨೩-೨೪ ನೇÀ ಸಾಲಿನಲ್ಲಿ ಉದ್ಯೋಗ ಚೀಟಿ ವಿತರಣಾ ಅಭಿಯಾನ ಕೈಗೊಂಡಿದ್ದು ಇಗಾಗಲೇ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು
ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ ಮಾತನಾಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ

ಒಂದು ವರ್ಷಕ್ಕೆ ೧೦೦ ದಿನಗಳ ಉದ್ಯೋಗ ಕೊಡಲಾಗುವುದು ವಿಕಲಚೇತನರ ನಿರ್ವಹಿಸಬೇಕಾದ ಕೆಲಸದ ಕಾಮಗಾರಿಗಳನ್ನು ಅವರ ಅಂಗವೈಕಲ್ಯದ ವಿವಿದ ಪ್ರಮಾಣಗಳನ್ನು ಆಧರಿಸಿ ಕೂಲಿ ಕೆಲಸ ನೀಡಲಾಗವುದು, ವಿಕಲಚೇತನ ವ್ಯಕ್ತಿಗಳನ್ನು ಕಾರ್ಯಕ್ಷೇತ್ರದಲ್ಲಿ ಕಾಯಕ ಬಂದುಗಳಾಗಿ ವಿಶೇಷ ಆದ್ಯತೆ ನೀಡಲಾಗಿದೆ ಹಾಗೂ ಪ್ರಸ್ತುತ ವರ್ಷದಲ್ಲಿ ೩೧೬ ರೂ ಕೂಲಿ ದರ ಇದೆ ,ವೈಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಂಡು ತಮ್ಮ ಜೀವನ ಸದೃಡ ಮಾಡಿಕೊಳ್ಳಬಹುದು ಎಂದು ಹೇಳಿದರು
ವಿಕಲಚೇತನರಾದ ಚಂದ್ರವ್ವಾ ತಂಗೋಜಿ ಮಾತನಾಡಿ ಯಾವುದೆ ಕೆಲಸ ಮಾಡದೆ ಮನೆಯಲ್ಲಿ ಕುಳಿತುಕೊಂಡು ಮುಂದಿನ ಜೀವನ ಹೇಗೆ ಎಂದು ಚಿಂತೆಯಲ್ಲಿದ್ದಾಗ ನನ್ನ ನೆರವಿಗೆ ಬಂದಿದ್ದು ಉದ್ಯೋಗ ಖಾತರಿ ಯೋಜನೆ ಎಂದು ಹೇಳಿದಳು

ಐಇಸಿ ಸಂಯೋಜಕರಾದ ರಂಜೀತ ಕಾಂಬಳೆ ಎಮ್.ಐ.ಎಸ್ ಸಂಯೋಜಕರಾದ ಚೇತನ ಶಿರಹಟ್ಟಿ ತಾಲ್ಲೂಕ ಪುನರ್ವಸತಿ ಕಾರ್ಯಕರ್ತೆರಾದ ಅನುಸಯಾ ಬಾಳಾಪ್ಪಗೋಳ ಹಾಗೂ ಎಲ್ಲ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು ಕಾರ್ಯಕ್ರಮ ನಿರೊಪಣೆ ಸವಿತಾ ಪಾಟೀಲ ಮಾಡಿದರು.


Share with Your friends

You May Also Like

More From Author

+ There are no comments

Add yours