ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಗ್ರಾಮೀಣ ಭಾಗದ ಜನರ ಜೀವನಕ್ಕೆ ಆರ್ಥಿಕ ಭದ್ರತೆ ಹೆಚ್ಚಿಸಲು ಅಕುಶಲ ಕಾರ್ಮಿಕರಿಗೆ ವರ್ಷದಲ್ಲಿ ನೂರು ದಿನಗಳ ಕೆಲಸ ಒದಗಿಸುವ ಗುರಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆ ಹೊಂದಿದೆ. ಒಂದು ಕುಟುಂಬದ ವಯಸ್ಕರ ಸದಸ್ಯರು ಸ್ವಯಂ ಪ್ರೇರಿತರಾಗಿ ನೊಂದಣಿಯಾದರೆ ಅಂತಹವರಿಗೆ ನೂರು ದಿನಗಳ ಉದ್ಯೋಗ ನೀಡಲಾಗುವುದು. ಬಡ ಕುಟುಂಬಗಳ ಆರ್ಥಿಕ ಸಿತ್ಥಿಯನ್ನು ಸುಧಾರಿಸುವಲ್ಲಿ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್ ಹೇಳಿದರು.
ತಾಲುಕಿನ ಚಿಂಚಣಿ ಗ್ರಾಮ ಪಂಚಾಯತಿಯ ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಅವರು ಎಪ್ರೀಲ ಒಂದನೇ ದಿನಾಂಕದಿಂದ ಕೂಲಿಕಾರರಿಗೆ ೩೧೬ ರೂ ಕೂಲಿ ಹೆಚ್ಚಳವಾಗಿದ್ದು ಗ್ರಾಮೀಣ ಜನರು ಹೆಚ್ಚು ಈ ಯೋಜನೆಯಲ್ಲಿ ಪಾಲಗೊಳ್ಳಬೇಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಉತ್ತಮವಾದ ಆಸ್ತಿ ಸೃಜನೆ ಮಾಡಬೇಕು ಎಂದು ತಿಳಿಸಿದರು
ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಕೇಳಿಬಂದ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಕೆಲಸ ನೀಡಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡದಿದ್ದರೆ ಸಂಬAಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಿಂಗಪ್ಪ ಮಸಳಿ, ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ, ಪಿ.ಡಿ.ಓ ಕೆ.ಎ.ಮೋಮಿನ, ಐಇಸಿ ಸಂಯೋಜಕರಾದ ರಂಜೀತ ಕಾಂಬಳೆ, ತಾಂತ್ರಿಕ ಸಂಯೋಜಕರಾದ ಮುದ್ದಶೀರಖಾನ ಪಠಾಣ, ತಾಂತ್ರಿಕ ಸಹಾಯಕರಾದ ಕಾಂಚನಾ ಪಾಟೇಕರ, ಬಿ.ಎಫ್.ಟಿ ರಾಮಚಂದ್ರ ಕಟ್ಟಿಕರ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
+ There are no comments
Add yours