ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಗಣೇಶ ಹುಕ್ಕೇರಿ ಪರ ಭರ್ಜರಿ ಪೃಚಾರ ನಡೆಸಿ ಭಾರಿ ಬಹುಮತದಿಂದ ಗೆಲ್ಲಿಸಿ ಮರಳಿ ಅಮೇರಿಕಾ ದೇಶಕ್ಕೆ ತೆರಳಿದ ಸಹೋದರಾದ ಗಿರೀಶ ಕೇದಾರಿ ಹುಕ್ಕೇರಿ ಅವರನ್ನು ಹುಕ್ಕೇರಿ ಅಭಿಮಾನಿಗಳು ಅದ್ದೂರಿಯಾಗಿ ಬಿಳ್ಕೋಟ್ಟರು.
ಗಣೇಶ ಹುಕ್ಕೇರಿ ದೊಡ್ಡಪ್ಪನ ಮಗ ಗಿರೀಶ ಕೇದಾರಿ ಹುಕ್ಕೇರಿ ಅವರು ಅಮೇರಿಕಾ ದೇಶದಲ್ಲಿ ಸಾಫ್ಟವೇರ್ ಇಂಜನೀಯರ ಇದ್ದು ಚುನಾವಣೆ ನಿಮಿತ್ಯ ಸಹೋಧರ ಗಣೇಶ ಪರ ಪ್ರಚಾರಕ್ಕೆ ಒಂದು ತಿಂಗಳು ಭಾರತಕ್ಕೆ ಆಗಮೀಸಿ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಕಳೆದ 15 ದಿನ ಭರ್ಜರಿ ಪ್ರಚಾರ ನಡೆಸಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಸುಮಾರು 78500 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಗಣೇಶ ಹುಕ್ಕೇರಿ ಗೆಲುವಿನಲ್ಲಿ ಸಹೋಧರ ಗಿರೀಶ ಕೇಧಾರಿ ಹುಕ್ಕೇರಿ ಪ್ರಯತ್ನ ದೊಡ್ಡದಿದ್ದು. ಸಹೋಧರ ಗಣೇಶನ ಬಾರಿ ಬಹುಮತದಿಂದ ಗೆಲ್ಲಿಸಿದ ಖುಷಿಯಲ್ಲಿ ಅವರು ಅಮೇರಿಕಾಕ್ಕೆ ತೆರಳುವ ವೇಳೆಯಲ್ಲಿ ಯಕ್ಸಂಬಾ ಪಟ್ಟಣದ ಹುಕ್ಕೇರಿ ಅಭಿಮಾನಿಗಳು ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಬಿಳ್ಕೋಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ಅವೆಉ. ಚುನಾವಣೆ ಸಂದರ್ಭದಲ್ಲಿ ನನ್ನ ಪ್ರಚಾರಕ್ಕೆ ಕೆಲಸ ಕಾರ್ಯ ಬಿಟ್ಟು ಅಮೇರಿಕಾದಿಂದ ಭಾರತಕ್ಕೆ ಬಂದಿರುವ ನನ್ನ ಸಹೋಧರ ಗಿರೀಶ ಅವರು ಕಳೆದ 15 ದಿನಗಳ ವರೆಗೆ ನನ್ನ ಜೊತೆ ಪ್ರಚಾರ ನಡೆಸಿ ನನ್ನನ್ನು ಗೆಲ್ಲಿಸಿ ಮರಳಿ ಅಮೇರಿಕಾಕ್ಕೆ ತೆರಳಿರುವ ಗಿರೀಶ ಅವರು ಪ್ರಯಾಣ ಸುಖಕರವಾಗಿರಲಿ ಎಂದು ಆಶೀಸಿದರು.
+ There are no comments
Add yours