“ಜೊಲ್ಲೆ ಗ್ರೂಪ್ ವತಿಯಿಂದ ಜೂನ್ ೨೧ ರಂದು ೯ ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ” – ಸಂಸದ ಅಣ್ಣಾಸಾಹೇಬ ಜೊಲ್ಲೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–
ತಾಲುಕಿನ ಯಕ್ಸಂಬಾ ಪಟ್ಟಣದ ಹೊರವಲಯದಲ್ಲಿರುವ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಶಾಲೆ ನನದಿ ಕ್ಯಾಂಪಸನ ಆವರಣದಲ್ಲಿ ಜೂನ್ ೨೧ ರಂದು ಮುಂಜಾನೆ ೬ ಗಂಟೆ ೩೦ ನಿಮಿಷಕ್ಕೆ ಜೊಲ್ಲೆ ಗ್ರೂಪ್ ವತಿಯಿಂದ ಅಂತರಾಷ್ಟಿಯ ಯೋಗ ದಿನಾಚರಣೆ ಆಯೋಜಿಸಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಹಿತಿ ನೀಡಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ೬೦೦೦ ಯೋಗಾಪಟುಗಳಿಗೆ ಆಸನ ವ್ಯವಸ್ಥೆ, ಮತ್ತು ಎಲ್.ಇ.ಡಿ.ಪರದೆಗಳನ್ನು ಅಳವಡಿಸಲಾಗುವುದು.ಅದೇ ರೀತಿ ಯೋಗಾಭ್ಯಾಸದ ನಂತರ ಎಲ್ಲರಿಗೂ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಯೋಗಾಸಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಜೂನ್ ೨೧ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದರು.ಅದರ ನಂತರ, ಸುಮಾರು ೧೭೫ ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಜೊಲ್ಲೆ ಗ್ರೂಪ್ ಪ್ರತಿ ವರ್ಷವೂ ಅಂತರಾಷ್ಟ್ರೀಯ ಯೋಗ ದಿನವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸುತ್ತಾರೆ. ಕಳೆದ ವರ್ಷ ನಿಪ್ಪಾಣಿ ನಗರದಲ್ಲಿ ದೊಡ್ಡ ಮಟ್ಟದ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ವರ್ಷವೂ ಜೊಲ್ಲೆ ಗ್ರೂಪ್ ಮತ್ತು ಪತಂಜಲಿ ಯೋಗಪೀಠ ಸಹಯೋಗದೊಂದಿಗೆ ಆಯೋಜಿಸಿದ್ದ ಭವ್ಯ ಯೋಗ ದಿನಾಚರಣೆಯನ್ನು ಶಿವಶಂಕರ್ ಜೊಲ್ಲೆ ಸಿಬಿಎಸ್‌ಇ ವತಿಯಿಂದ ನನದಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ಈ ದಿನ ಕರ್ನಾಟಕ ಉಸ್ತುವಾರಿ ಪತಂಜಲಿ ಯೋಗಪೀಠ ಹರಿದ್ವಾರದ ಯೋಗಾಚಾರ್ಯ ಭವರಲಾಲ ಆರ್ಯ ಉಪಸ್ಥಿತರಿದ್ದು ಯೋಗ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.


Share with Your friends

You May Also Like

More From Author

+ There are no comments

Add yours