“ಅಧಿಕಾರಿಗಳ ನಿರ್ಲಕ್ಷ್ಯ ತನದಿಂದ ಇದ್ದರೂ ಇಲ್ಲದಂತಾಗಿರುವ ಮಾಂಜರಿ ಗ್ರಾಮದ ಬಸ್ ನಿಲ್ದಾಣ” ಜನರ ಪರದಾಟ”

Estimated read time 1 min read
Share with Your friends

ಅಂಕಣ : ಹುಜೈಫಾ ಕಿಲ್ಲೇದಾರ

ಚಿಕ್ಕೋಡಿ :–

ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸತತ ೨೦ ವರ್ಷಗಳಾದರು ಇಲ್ಲಿಯ ಬಸ್ ನಿಲ್ದಾಣವು ಇದ್ದರು ಸಹಿತ ಇಲ್ಲದಂತಾಗಿದೇ ಮಾಂಜರಿ ಜನತೆಯು ಸಹ ಇವಾಗ ಇದನ್ನು ಮರೆತುಬಿಟ್ಟಿದೇ ಇಲ್ಲಿಯ ಬಸ್ ನಿಲ್ದಾಣವು ಪ್ರಾಣ ಗಳಿಗೆ, ಕುಡುಕರಿಗೆ, ಅಲೆಮಾರೀಗಳಿಗೆ ಅಷ್ಟೇ ಅಲ್ಲದೇ ಖಾಸಗಿ ವಾಹನಗಳ ನಿಲ್ಲುಗಡೆಯ ಒಂದು ತಾಣವಾಗಿ ಉಳದಿದೇ ಇದರ ಬಗ್ಗೇ ಎಷ್ಟೊ ಸಾರಿ ದಿನಪತ್ರಿಕೆ, ವಾರಪತ್ರಿಕೆ ಹಾಗು ಮಾಧ್ಯಮ ದರ್ಶನದಲ್ಲಿಯೂ ಸಹ ಅಂಕಣಗಳಾದವು ಆದರು ಸಂಬಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲಾ,

ಅಧಿಕಾರಿ ವರ್ಗ, ಆಡಳಿತ ವರ್ಗ, ಇದನ್ನು ಒಂದು ಸಮಸ್ಯೆಯಂದು ಪರಿಗಣ ಸುತ್ತಿಲ್ಲಾ ವಿಶಿಷ್ಟವೇಂದರೆ ಇ ಗ್ರಾಮವೇನು ಮುಖ್ಯಹೆದ್ದಾರೀಯನ್ನು ಬಿಟ್ಟು ಜನರವಹಿವಾಟು ವಿಲ್ಲದಂತಹ ಸ್ಥಳದಲ್ಲಿ ಇಲ್ಲಾ, ಇ ಗ್ರಾಮದ ಮುಖಾಂತರ ರಾಷ್ಟಿçಯ ಹೆದ್ದಾರಿ ೧೬೦ ಹಾದುಹೋಗುತ್ತೆ, ಅಷ್ಟೇಅಲ್ಲಾ ದಿನನಿತ್ಯವು ಹಲವಾರು ಅಧಿಕಾರಿಗಳು, ರಾಜಕಾರಣ ಗಳು ಇದೇ ಗ್ರಾಮದ ಮುಖಾಂತರ ಹಾದು ಹೋಗುತ್ತಾರೆ ಏಕೆಂದರೆ ಇಲ್ಲಿಂದನೇ ಜಿಲ್ಲಾ ಮತ್ತು ತಾಲೂಕು ಆಡಳಿತ ಕೇಂದ್ರ ಸಮಿಪವಾಗುತ್ತೆ ಹಾದು ಹೋಗುವಾಗ

ಇಲ್ಲಿಯ ಜನರು ರಾಷ್ಟಿçಯ ಹೆದ್ದಾರಿಯ ಅಕ್ಕಪಕ್ಕ ಯಾವ ಕಾರಣಕ್ಕಾಗಿ ನಿಂತಿರುತ್ತಾರೆ, ಏಕೇ ಬಸ್ ನಿಲ್ದಾಣವಿದ್ದರು ಸಹಿತ ಬಸ್‌ಗಳು ನಿಲ್ದಾಣದ ಒಳಗಡೆ ಹೋಗುವದಿಲ್ಲಾ, ಯಾವಕಾರಣಕ್ಕಾಗಿ ಇಲ್ಲಿಯ ಜನರು ಬಿಸಿಲೆನ್ನದೆ, ಮಳೆಯನ್ನದೆ ತಮಗೆ ಎಷ್ಟೇ ತೋಂದರೆಯಾದರು ಹೆದ್ದಾರಿಯ ಅಕ್ಕಪಕ್ಕ ನಿಂತು ಬಸ್‌ಗಾಗಿ ಕಾಯುತಿರುತ್ತಾರೆ ಎಂದು ವಿಚಾರಮಾಡದೇ ಅದೇರಿತಿ ನೋಡಿಯು ನೋಡಲಾರದ ಹಾಗೆ ಹೋರಟುಹೋಗುತ್ತಾರೆ ಅಷ್ಟೆ ಅಲ್ಲಾ ಕೇವಲ ಅಧಿಕಾರಿಗಳು ಮಾತ್ರವಲ್ಲದೇ ಪಕ್ಷಕ್ಕಾಗಿ ಅಥವಾ ಸರಕಾರಿ ಕೇಲಸಕ್ಕಾಗಿ ಇಲ್ಲವಾದರೇ ಜಿಲ್ಲಾ ಪ್ರವಾಸಕ್ಕಾಗಿ ಬಂದರೆ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳು ಸಹ ಇದೇ ಗ್ರಾಮದ ಹೆದ್ದಾರಿ ಮಾರ್ಗವಾಗಿ ಹಾದು ಹೋಗೂತ್ತಾರೆ, ಯಾವ ಕಾರಣಕ್ಕಾಗಿ ಇ ಹೆದ್ದಾರಿಯ

ಅಕ್ಕಪಕ್ಕ ಬಸ್ಸಿಗಾಗಿ ನಿಂತಿರುವ ಜನರು ಅವರ ಕಣ್ಣಿಗೆ ಕಂಡಿಲ್ಲಾ ಎನ್ನುವದು ಆರ್ಶ್ಚಯಕರವಾದ ಸಂಗತಿಯಾಗಿದೆ. ಮಾಂಜರಿ ಗ್ರಾಮದಿಂದ ಮಹಾರಾಷ್ಟ್ರದಿಂದ ಮಿರಜ ಪಟ್ಟಣಕ್ಕೆ ಹಲವಾರು ವಯೋವೃಧ್ಧ ರೋಗಿಗಳು ದಿನನಿತ್ಯ ಬಸ್ ಮುಖಾಂತರ ಪ್ರಯಾಣ ಮಾಡುತ್ತಾರೆ ಕುಳಿತುಕೋಳ್ಳಳು ಆಸನಗಳಿಲ್ಲದ ಕಾರಣ ಮೋರ್ಛೆ ಹೂಗುತ್ತಾರೆ ಇದಕ್ಕೇಲ್ಲಾ ಯಾರು ಹೋಣೆಗಾರರು? ಅಷ್ಟೇ ಅಲ್ಲಾ ಇಲ್ಲಿ ಬಸ್ ನಿಲ್ದಾಣ ನಿರುಪಯೋಗವಾಗಿರುವದರಿಂದ ಅತೀ ದೋಡ್ಡ ಸಮಸ್ಯೆಯನ್ನು ಇ ಗ್ರಾಮದ ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ ದಿನನಿತ್ಯ ಮುಂಜಾನೆ ಮಾಂಜರಿಯಿಂ ದ ಚಿಕ್ಕೋಡಿ ಮತ್ತು ಕಾಗವಾಡ ಪಟ್ಟಣಕ್ಕೇ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಹೋಗುವ ಇ ವಿದ್ಯಾರ್ಥಿಗಳು ಒಂದು ದೋಡ್ಡ ಯುಧ್ದವನ್ನೇ ಮಾಡಬೇಕಾಗುತ್ತೇ ಇ ಮುಂಜಾನೆಯ ಸಮಯದಲ್ಲಿ ವಿಜಯಪುರದಿಂದ ಬೆಳಗಾವಿಗೆ ಹೋಗುವ ಬಸ್‌ಗಳು ತುಂಬಿ ಮಾಂಜರಿ ಗ್ರಾಮಕ್ಕೇ ಬಂದು ಇಲ್ಲಿ ಹೇದ್ದಾರಿಯ ಪಕ್ಕ ನಿಂತಿರುವ ವಿದ್ಯಾರ್ಥಿಗಳ ಸಮೂಹವನ್ನು ನೋಡಿ ಬಸ್‌ನಿಲ್ದಾಣ ವಿಲ್ಲದಿರುವದರಿಂದ ಹಾಗೇಯೆ ಬಸ್ ವಿದ್ಯಾರ್ಥಿಗಳ ಹತ್ತಿರ ನಿಲ್ಲಿಸದೇ ೫೦ ಮೀ ಮುಂದೆ ಅಥವಾ ಜನ ಸಮೂಹದ ಹಿಂದೆ ನಿಲ್ಲಿಸಿ ಯಾರು ಗ್ರಾಮಕ್ಕೇ ಇಳಿಯ ಬೇಕ್ಕೇನ್ನುತ್ತಾರೆ ಅವರನ್ನು ಇಳಿಸಿ ಅತಿ ವೇಗದಲ್ಲಿ ವಾಹನ ಚಲಾಯಿಸಿ ವಿದ್ಯಾರ್ಥಿಗಳ ಹತ್ತಿರ ನಿಲ್ಲಿಸದೇ ಹಾಗೆಯೆ ಹೋರಟು ಹೋಗುತ್ತಾರೆ

ಇದರ ಪರಿಣಾಮವಾಗಿ ಕಾಲೇಜಿಗೆ ಸಮಯಕ್ಕೇ ಹೋಗಲು ವಿದ್ಯಾರ್ಥಿಗಳು ಯಲ್ಲಿ ೫೦ ಮೀ ಹಿಂದೇ ಅಥವಾ ಮುಂದೆ ಬಸ್ ನಿಂತಿರುತ್ತೆಯೋ ಅಲ್ಲಿ ಓಡಿ ಹೋಗಿ ಬಸ್ ಹತ್ತಿಕ್ಕೋಳ್ಳು ಹರಸಾಹಸ ಪಡಬೇಕಾಗುತ್ತಿದೇ ಇದು ಮುಂಜಾನೆ ೮ ರಿಂದ ೧೦ ಘಂಟೆಯವರೆಗೆ ಆಗುವಂತಹ ದಿನನಿತ್ಯದ ಒಂದು ವಿಷಯವಾಗಿದೇ, ಎಷ್ಟೋ ವಿದ್ಯಾರ್ಥಿಗಳು ಓಡಿ ಹೋಗಿ ಬಸ್ ಹತ್ತುವ ಪ್ರಯತ್ನದಲ್ಲಿ ಕೈ, ಕಾಲುಗಳಿಗೆ ಗಾಯಮಾಡಿಕೋಂಡಾಯಿತು ಆದರೆ ಗಾಯವಾದರು ಸಹಿತ ಅಥವಾ ಓಡಿ ಬಸ್ ಹತ್ತುವಾಗ ಏಡವಿಬಿದ್ದರು ಸಹಿತ ವಿದ್ಯಾಭ್ಯಾಸಕ್ಕಾಗಿ ಮತ್ತೆ ಎದ್ದುನಿಂತು ಇನ್ನೋಂದು ಬಸ್‌ಗಾಗಿ ಅದೇ ಗಾಯಗಳ ಜೋತೆಗೆ ಅದೇರಿತೀ ಬಿಸಿಲ್ಲಲಿ ಅಥವಾ ಮಳೆಯಲ್ಲಿ ಮತ್ತೋಂದು ಬಸ್‌ಗಾಗಿ ಹೇದ್ದಾರಿ ಪಕ್ಕದಲ್ಲಿ ಕಾಯಿತಾ ನಿಂತು ಬಿಡುತ್ತಾರೆ. ಇದ್ದಕ್ಕೇಲ್ಲಾ ಒಂದೆ ಕಾರಣ ಅದೇನೆಂದರೆ ಮಾಂಜರಿಯಲ್ಲಿ ಬಸ್ ನಿಲ್ದಾಣ ನಿರೂಪಯೋಗವಾಗಿರುವದು

ಅನಿಸುವ ಮಟ್ಟಿಗೆ ಇ ವಿದ್ಯಾರ್ಥಿಗಳು ಅಷ್ಟೇ ಅಲ್ಲಾ ಅವರ ಮಕ್ಕಳು ಸಹಿತ ಇದೇ ತೋಂದರೆ ಸಹಿಸಬೇಕಾಗುತ್ತೆವೇನೋ? ಅಕ್ಕ ಪಕ್ಕದ ಗ್ರಾಮಗಳಾದ ಶಿರಗುಪ್ಪಿ ಮತ್ತು ಅಂಕಲಿಯಲ್ಲಿ ಸುಸಜ್ಜಿತವಾದ ಮಾನವ ಸಂಪನ್ಮೂಲ ಭರಿತ ಬಸ್ ನಿಲ್ದಾಣ ಗಳಿವೆ ಇ ಗ್ರಾಮಗಳು ಸಹ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದಲ್ಲಿವೇ. ಯಾಕೇ ಇ ರಿತೀ ಚಿಕ್ಕೋಡಿ ವಿಭಾಗವು ಅಸಮಾನತೆಯನ್ನು ಮಾಡುತ್ತಿದೆಯೋ ಗೋತ್ತಿಲ್ಲಾ ಆದರೆ ಅಧಿಕಾರ ವರ್ಗ ಮನಸ್ಸು ಮಾಡಿದರೆ ಬರುವಂತಹ ಎಲ್ಲ ಅಡಚಣೆಯನ್ನು ದೂರು ಮಾಡಿ ವಿದ್ಯಾರ್ಥಿಗಳಿಗೋಸ್ಕರ ಒಂದು ಸುಸಜ್ಜಿತವಾದ ಬಸ್ ನಿಲ್ದಾಣವನ್ನು ಮಾಂಜರಿ ಗ್ರಾಮಕ್ಕೇ ಕಲಪಿಸಬಹುದು. ವರದಿಯಾದ ಮೇಲಾದರು ಅಧಿಕಾರ ಮತ್ತು ಆಡಳಿತ ವರ್ಗ ಎಷ್ಟು ತರಿತ್ವವಾಗಿ ಇದರ ಬಗ್ಗೆ ಕಾರ್ಯಾಚರಣೆಯನ್ನು ಮಾಡುತ್ತದೆ ಎಂದು ಕಾದು ನೋಡಬೇಕಿದೇ.


Share with Your friends

You May Also Like

More From Author

+ There are no comments

Add yours