ಚಿಕ್ಕೋಡಿ :–
“ವಿಶ್ವ ಜನಸಂಖ್ಯಾ ದಿನಾಚರಣೆ “
ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತವಾಗಿರುವುದರಿಂದ ನಮ್ಮಲ್ಲಿಯೂ ಜನಸಂಖ್ಯೆ ನಿಯಂತ್ರಣಕ್ಕೆ ಜನಜಾಗೃತಿ ಅವಶ್ಯಕ ಎಂದು ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಅಧಿಕಾರಿಯಾದ ಡಾ. ಎಸ್. ಎಸ್ ಗಡೇದರವರು ಹೇಳಿದರು.
ಅವರು ಇಂದು ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜು, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕೆ ಎಲ್ ಇ ಆಯುರ್ವೇದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡುತ್ತಾ

ಈ ವರ್ಷದ ಘೋಷವಾಕ್ಯ “ತಾಯಿಯಾಗುವ ವಯಸ್ಸು, ಸದೃಡ ದೇಹ ಮತ್ತು ಸರಿಯಾದ ಮನಸ್ಸಿನ ಸಿದ್ದತೆ” ಎಂಬುದಾಗಿದೆ ಇದರ ಪ್ರಯುಕ್ತ ನಮ್ಮ ದೇಶದಲ್ಲಿ ಸೂಕ್ತ ವಯಸ್ಸಿನಲ್ಲಿ ಮದುವೆ, ೨ ಮಕ್ಕಳ ನಡುವೆ ೩ ವರ್ಷಗಳ ಅಂತರ, ಆಪ್ರಾಪ್ತ ವಯಸ್ಸಿನಲ್ಲಿ ಮಕ್ಕಳನ್ನು ಹೇರುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮತ್ತು ಕುಟುಂಬ ಕಲ್ಯಾಣ ವಿಧಾನದಿಂದ ಜನಸಂಖ್ಯೆಯ ನಿಯಂತ್ರಣ ಹಾಗೂ ತಾಯಿಯ ಆರೋಗ್ಯದ ಬಗ್ಗೆ ಜನರಿಗೆ ವೈದ್ಯರು ಹಾಗೂ ವಿದ್ಯಾರ್ಥಿಗಳು ಜನರಿಗೆ ಮಾಹಿತಿಯನ್ನು ನೀಡುವ ಮೂಲಕ ಪ್ರತಿಯೊಬ್ಬರು ಜನಸಂಖ್ಯೆ ನಿಯಂತ್ರಣವನ್ನು ಮಾಡಲು ಸಹಕಾರಿಸಬೇಕೆಂದು ಹೇಳಿದರು.
ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸುಕುಮಾರ ಬಾಗಾಯಿ ಮಾತನಾಡುತ್ತಾ ಈ ದಿನದ ಮಹತ್ವವನ್ನು ಕುರಿತು ಮಾತನಾಡಿ ಜನಸಂಖ್ಯೆಯ ವೇಗವಾಗಿ ಹೆಚ್ಚಳವಾಗುತ್ತಿರುವದರಿಂದ ಆಗುವ ತೋದರೆಗಳು ಹಾಗೂ ಜನಸಂಖ್ಯೆ ನಿಯಂತ್ರಣದಿಂದ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅದ್ಯಕ್ಷತೆ ವಹಿಸಿದ ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿರವರು ಮಾತನಾಡುತ್ತಾ ಜನಸಂಖ್ಯೆ ನಿಯಂತ್ರಣದಲ್ಲಿ ಲಿಂಗ ಸಮಾನತೆ, ಉತ್ತಮ ಶಿಕ್ಷಣ, ಮಹಿಳಾ ಸಬಲೀಕರಣ, ಮತ್ತು ಕುಟುಂಬ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ಹೇಳಿದರು
ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಉಪನ್ಯಾಸಕರಾದ ಡಾ. ರವಿ ಮಡಿವಾಳರ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವ ಕ್ರಮಗಳು ಮತ್ತು ಜಾಗತಿಕ ಅಂಕಿಅಂಶಗಳೊಂದಿಗೆ ಅರಿವು ನೀಡಿದರು.
ಕಾರ್ಯಕ್ರಮದಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಸಂತೋಷ ಕಾಂಬಳೆ, ರಾಜಶೇಖರ ನಾಯಿಕ, ಖಿಲಾರೆ, ಅಧ್ಯಾಪಕರು ಮತ್ತು ವೈದ್ಯರು ಭಾಗವಹಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಅಪ್ರೀನ್ ಅವರು ನಿರೂಪಿಸಿದರು. ಡಾ. ಶಿವಾನಂದ ಬಿರಾದಾರ ಸ್ವಾಗತಿಸಿದರು, ಡಾ. ಸತೀಶ ಕರಜಗಿ ವಂದಿಸಿದರು.





