ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ
ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾ
ಹಾಗೂ
ಬಸವಜ್ಯೋತಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜು, ಯಕ್ಸಂಬಾ
ಇವರ ಸಂಯುಕ್ತಾಶ್ರಯದಲ್ಲಿ
ಸನ್ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಸನ್ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಯಕ್ಸಂಬಾದ ಶ್ರೀ ಬೀರೇಶ್ವರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿಕೊಂಡಿರುವ ಆರ್ ಎಮ್ ಮಠದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳು ಉಪನಿರ್ದೇಶಕರ ಕಾರ್ಯಾಲಯ, ಚಿಕ್ಕೋಡಿ ಚಾಲನೆ ನೀಡಿದರು. ಪ್ರಮುಖ ಉಪಸ್ಥಿತಿ ವಹಿಸಿದ ಜೊಲ್ಲೆ ಗ್ರೂಪ್ ಉಪಾಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಸಮಾಜದ ಕೆಳವರ್ಗದ ಜನರಿಗೆ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣ ನೀಡುವುದು ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ಉದ್ದೇಶವಾಗಿದೆ. ಅದಕ್ಕೊಸ್ಕರ ಶಿಕ್ಷಣದಲ್ಲ ವಿನೂತನ ಯೋಜನೆಗಳನ್ನು ರೂಪಿಸುತ್ತಾ ಸಂಸ್ಥೆಯು ಇವತ್ತು ಸಮಾಜದ ಸಹಕಾರದೊಂದಿಗೆ ಹೆಮ್ಮರವಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದ ಉಪನಿರ್ದೇಶಕರ ಕಾರ್ಯಾಲಯ, ಚಿಕ್ಕೋಡಿ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳಾದ ಆರ್ ಎಮ್ ಮಠದ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಪಟ್ಟಣದ ಮಾದರಿಯಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಸಕಲ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ಪಾತ್ರ ಅತಿ ಮುಖ್ಯ ಎಂದು ಪ್ರಶಂಶಿಸಿದರು. ಶಿಕ್ಷಣವು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರವಹಿಸಬೇಕು, ಶಿಕ್ಷಕರಾದವರು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳನ್ನು ಕೂಡಾ ನಿರಂತರ ಬೋಧಿಸುವುದರಿಂದ ಇದು ಸಾಧ್ಯ ಎಂದರು.

ಅದೇರೀತಿ ಮಾನಸಿಕವಾಗಿ ಸದೃಢವಾಗುವುದರ ಜೊತೆಗೆ ದೈಹಿಕವಾಗಿಯೂ ಕೂಡ ಸದೃಢವಾಗಬೇಕಾದರೆ ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಬದಲಾಯಿಸಲು ಕರೆ ನೀಡಿದರು. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ನಿರಂತರ ಓದು, ಗಟ್ಟಿಯಾದ ಗುರಿ ಹಾಗೂ ದೃಢವಾದ ಆತ್ಮವಿಶ್ವಾಸ ಇಟ್ಟುಕೊಂಡು ನಾನು ಜಯಿಸಬಲ್ಲೆ ಎಂದು ಧನಾತ್ಮಕವಾಗಿ ಸದಾ ಮುನ್ನುಗ್ಗುತ್ತಿರಬೇಕು, ಶಿಕ್ಷಕರು ಕೇವಲ ಪಠ್ಯವನ್ನು ಮಾತ್ರ ಬೋಧಿಸದೆ ಮಗು ಸಮಾಜದಲ್ಲಿ ಬದುಕುವ ಕಲೆಯನ್ನು ಕೂಡ ಕಲಿಸಬೇಕು ಒಟ್ಟಿನಲ್ಲಿ ಪ್ರತಿಮಗು

ಸಮಾಜಮುಖಿಯಾಗಿ ಬೆಳೆಯಬೇಕು ಎಂದರು.
ಈ ಸಂದರ್ಭದಲ್ಲಿ ನೂತನವಾಗಿ ದಾಖಲಾತಿ ಹೊಂದಿದ ಮಕ್ಕಳಿಗೆ ಸಸಿ ನೀಡುವುದರ ಮೂಲಕ ವೇದಿಕೆಯ ಮೇಲಿನ ಗಣ್ಯರು ಸ್ವಾಗತಿಸಿಕೊಂಡರು. ಶಿವಶಂಕರ ಜೊಲ್ಲೆ ಕನ್ನಡ ಶಾಲೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಿದರು. ಬಸವಜ್ಯೋತಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಧಾಕರ ಕಾಮನಗೋಳ ಎಇಇ ಪರೀಕ್ಷೆಯಲ್ಲಿ ಪ್ರತಿಶತ ೯೯% ಹಾಗೂ ಏಅಇಖಿ ಪರೀಕ್ಷೆಯಲ್ಲಿ ಅಥರ್ವ ಅಡಕೆ ಇಂಜಿನಿಯರ್ ವಿಭಾಗದಲ್ಲಿ ೮೫೭೪ ರ‍್ಯಾಂಕಿಂಗ್ ಪಡೆದದಕ್ಕಾಗಿ ಸಂಸ್ಥೆಯ ಪರವಾಗಿ ಅಭಿನಂದಿಸಿ ಸತ್ಕರಿಸಲಾಯಿತು. ಅದೇ ರೀತಿ ಅಂಗಸAಸ್ಥೆಗಳ ವಿದ್ಯಾರ್ಥಿಗಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಕೊಟ್ಟವು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ವಹಿಸಿಕೊಂಡಿದ್ದರು. ನಿರ್ದೇಶಕರಾದ ಸುಜಾತಾ ಕಬಾಡೆ, ಲತಾ ವಾಳಕೆ, ಸಂಸ್ಥೆಯ ಸಂಯೋಜನಾಧಿಕಾರಿಗಳಾದ ಎಮ್ ಎಮ್ ಪಾಟೀಲ ಹಾಗೂ ವಿವಿಧ ಅಂಗಸAಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ವ್ಹಿ ಆರ್ ಭಿವಸೆ ಸ್ವಾಗತಿಸಿದರು ಪ್ರಾಚಾರ್ಯರಾದ ಸಿ.ಪಿ.ಬನ್ನಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಸ್ನೇಹಾ ಕಾಂಬಳೆ ಮತ್ತು ಸ್ವಪ್ನಾ ವಾಳಕೆ ನಿರೂಪಿಸಿ ವಂದಿಸಿದರು.

Share this post:

Leave a Reply

Your email address will not be published. Required fields are marked *

You cannot copy content of this page