ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಸಹಕಾರಿ ಸಂಸ್ಥಾಪಕ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಸಹ ಸಂಸ್ಥಾಪಕರು ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿನ ಜ್ಯೋತಿ ವಿವಿಧ ಉದ್ದೇಶಗಳು ಸೌಹಾರ್ದ ಸಹಕಾರಿಯು ಪ್ರಸ್ತುತ ಆರ್ಥಿಕ ವರ್ಷದಲ್ಲಿ 1.11 ಕೋಟಿ ರೂ.ಗಳನ್ನು ನಿವಳ ಲಾಭ ಗಳಿಸಿದ್ದು ಶೇ.10ರಷ್ಟು ಲಾಭಾಂಶವನ್ನು ಸದಸ್ಯರ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಹಕಾರಿಯ ನಿರ್ದೇಶಕ ಕಲ್ಲಪ್ಪಣ್ಣಾ ಜಾಧವ ಹೇಳಿದರು.ರವಿವಾರ ತಾಲುಕಿನ ಯಕ್ಸಂಬಾ ಪಟ್ಟಣದ ಜ್ಯೋತಿ ಸೌಹಾರ್ದ ಸಹಕಾರಿಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು,ಜ್ಯೋತಿ ಸೌಹಾರ್ದ ಸಹಕಾರಿಯು ಇಂದು ಕ್ರೇಡಿಟ್ ವಿಭಾಗ 63 ಮತ್ತು ಬಾಜಾರ ವಿಭಾಗ 18 ಹೀಗೆ ಒಟ್ಟು 81 ಶಾಖೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.
2021-22ನೇ ಸಾಲಿನ ಶೇರು ಬಂಡವಾಳ 93,76 ಲಕ್ಷ ರೂ.ಗಳ ಮೇಲೆ ಶೇ.10ರಂತೆ ಸಹಕಾರಿಯ 21,752 ಸದಸ್ಯರ ಬ್ಯಾಂಕ್ ಖಾತೆಗಳಿಗೆ ಒಟ್ಟು 9.37 ಲಕ್ಷ ರೂ. ಗಳನ್ನು ಜಮಾ ಮಾಡಲಾಗಿದೆ. ಸಹ ಕಾರಿಯಲ್ಲಿ ಸೇವೆ ಸಲ್ಲಿಸುತ್ತಿರುವ 415 – ಸಿಬ್ಬಂದಿ ಬೋನಸ್ ಒಂದು ತಿಂಗಳ ವೇತನ (8.33) 36,41
ಲಕ್ಷರೂ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು. 30,049 ಸದಸ್ಯರ ಹೊಂದಿದೆ , 181 ಕೋಟಿ ರು ಶೇರುಬಂಡವಾಳ, 1.20 ಕೋಟಿ ರೂ ನಿಧಿ, 2305 ಕೋಟ ಹೂಗಳನ್ನು ನೀವು ಸಂಗ್ರಹಿಸಿ 107,49 ಕೋಟಿ ರೂ ಸಾಲ ವಿತರಿಸಿದ 111 ಕೋಟಿ ರೂ. ನಿವಾಳ ಲಾಭಗಳಿಸಿದ್ದು ಸಹಕಾರಿಯ 222,98 ಕೋಟಿ ರೂ.ಗಳನ್ನು ದುಡಿಯುವ ಬಂಡವಾಳ ಹೊಂದಿದೆ ಎಂದು ಹೇಳಿದರು. ಅಧ್ಯಕ್ಷ ಚಂದ್ರಕಾಂತ ಖೋತ ಉಪಾಧ್ಯಕ್ಷ ಬಾಬುರಾವ ಮಾಳಿ, ನಿರ್ದೇಶಕರಾದ ಮಲಗೌಡಾ ಪಾಟೀಲ, ಜ್ಯೋತಿ ಗಿಡ್ಡ, ಕಲ್ಲಪ್ಪಾ ನಾಯಿಕ,ಶರಪುದ್ದಿನ್ ಮುಲ್ಲಾ,
ವಿಶ್ವನಾಥ ಪೇಟಕರ, ಲಕ್ಷಣ, ಪ್ರಭಾ, ರಮೇಶ ಚೌಗುಲೆ, ಮತ್ತು ಸವಿತಾ ಉಂದರೆ, ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಭಾವಿ, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
+ There are no comments
Add yours