ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲುಕಿನ ಕೆರೂರ ಗ್ರಾಮ ಪಂಚಾಯತಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಜಿ ಅವರ ಜೈ ಯಂತಿ ನಿಮಿತ್ಯವಾಗಿ ಕೆರೂರ ಗ್ರಾಮ ಪಂಚಾಯಿತಿಯಲ್ಲಿ ರಾಣಿ ಚನ್ನಮ್ಮಜಿ ಅವರ ಫೋಟೋ ಪೂಜೆ ಮಾಡಿ ಶತಕೋಟಿ ನಮನ್ ಸಲ್ಲಿಸಿ ಜೈಯಂತಿ ಆಚರಿಸಲಾಯಿತು
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ, ವೀರೇಂದ್ರ ಪಾಟೀಲ್ ಅವರು ಪೂಜೆ ಸಲ್ಲಿಸಿ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮೊದಲ ಮಹಿಳಾ ಹೋರಾಟಗಾರತಿ ವೀರ ವನಿತೆ ಬ್ರಿಟಿಷರ ವಿರುದ್ಧ ಕಡ್ಗ ಹಿಡಿದು ಹೋರಾಡಿದ ಪ್ರಥಮ ಮಹಿಳೆ ಆಗಿರುತ್ತಾರೆ ಎoದು ಹೇಳಿದರು ಮತ್ತು ವಿಶೇಷವಾಗಿ
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಸಂಜು ಎಸ್ ಬಡಿಗೇರ್ ಕರವೇ ಜಿಲ್ಲಾ ಸಂಚಾಲಕರು ಚೆನ್ನಮ್ಮ ಜಿ ಅವರ ಫೋಟೋಕೆ ನಮನ ಸಲ್ಲಿಸಿ ಮಾತನಾಡಿದರು ಬ್ರಿಟಿಷರ ವಿರುದ್ಧ ಮೊಟ್ಟ ಮೊದಲು ಕ್ರಾಂತಿ ಕಹಳೆ ಊದಿದ ಬೆಳಗಾವಿ ಜಿಲ್ಲೆಯ ಕಾಕತ್ತಿ ಗ್ರಾಮದ ಕಿತ್ತೂರಾಣಿ ಚೆನ್ನಮ್ಮ ಜಿ ಅವರು 1824ರ ಯುದ್ಧ ಮಾಡಿ ವಿಜಯ ಸಾಧಿಸಿದರು ಮಹಾ ಮಹಿಳೆ ತಾಯಿ ಚನ್ನಮ್ಮಜಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಮೈಗೂಡಿಸಿ ಕೊಳ್ಳಬೇಕೆಂದು ಮಾತನಾಡಿದರು
ಈ ಸಂದರ್ಭದಲ್ಲಿ ಅಜಿತ್ ಮಾಳಿ, ಸಂತೋಷ್ ಪಾಟೀಲ್, ಅಮೂಲ್ ನಾವಿ, ಮಲ್ಲು ಜಂಗ್ಟೆ ಹಾಗೂ ಸಿದ್ದು ಕಾಂಬಳೆ ಉಪಸ್ಥಿತರಿದ್ದರು.
+ There are no comments
Add yours