“ಕೆ.ಎಲ್.ಇ.ಸಿ.ಬಿ.ಕೋರೆ ತಾಂತ್ರಿಕ ಮಹಾವಿದ್ಯಾಲಯ ೭೫ ನೇ ಗಣರಾಜೋತ್ಸವದ ಆಚರಣೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಚಿದಾನಂದ ಬಿ ಕೋರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೭೫ನೇ ಗಣರಾಜೋತ್ಸವವನ್ನು ಆಚರಿಸಲಾಯಿತು. ದಿನಾಂಕ ೨೬.೦೧.೨೦೨೪ ರಂದು ಪ್ರಾಂಶುಪಾಲರಾದ ಪ್ರೋ. ದರ್ಶನಕುಮಾರ ಬಿಳ್ಳೂರ, ಕೆ. ಎಲ್. ಇ. ಸಿ. ಬಿ. ಕೋರೆ ತಾಂತ್ರಿಕ ಮಹಾವಿದ್ಯಾಲಯ, ಚಿಕ್ಕೋಡಿ ಮತ್ತು ಕೆ. ಎಲ್. ಇ. ಆರ್ಯುವೇದಿಕ ಮಹಾವಿದ್ಯಾಲಯದ ಪ್ರಾಚಾರ್ಯಾರಾದ ಡಾ|| ಕಿರಣಕುಮಾರ ಮುತ್ತನಾಳೆ ಇವರು ದ್ವಾಜಾರೋಹಣ ನೇರವೆರಿಸಿದರು. ಪ್ರಾಂಶುಪಾಲರಾದ ಪ್ರೋ. ದರ್ಶನಕುಮಾರ ಬಿಳ್ಳೂರರವರು ಮಾತನಾಡಿ, ಈ ದಿನವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿಯೋಬ್ಬರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಜವಾಬ್ದಾರಿಯುತ್ತವಾಗಿ ನಿಭಾಯಿಸಿದರೆ ಅದುವೆ ನಾವು ನೀಡುವ ದೇಶ ಸೇವೆ ಎಂದು ಕರೆ ನೀಡಿದರು. ವಿಧ್ಯಾರ್ಥಿಗಳು ಗಣರಾಜೋತ್ಸವದ ಕುರಿತು ಭಾಷಣ ಹಾಗೂ ದೇಶ ಭಕ್ತಿ ಗೀತೆಗಳನ್ನು ಹಾಡಿದರು. ವಿಧ್ಯಾರ್ಥಿಗಳಾದ ಅರ್ಥವ ಕರಾಡೆ ಮತ್ತು ಅಪೂರ್ವಾ ಪಾಟೀಲ ನಿರೂಪಿಸಿದರು.


Share with Your friends

You May Also Like

More From Author

+ There are no comments

Add yours