ಚಿಕ್ಕೋಡಿ :–
ಶನಿವಾರ ಯಕ್ಸಂಬಾ ಪಟ್ಟಣದ ಜೊಲ್ಲೆ ಶಿಕ್ಷಣ ಸಂಸ್ಥೆಯ ಬಸವ ಜ್ಯೋತಿ ಪದವಿ ಮಹಾವಿದ್ಯಾಲಯ, ಮೌಲಾನಾ ಅಬುಲ್ ಕಲಾಂ ಅಜಾದ್ ಬಿಎಸ್ ಡಬ್ಲೂ ಮತ್ತು ಎಂ ಎಸ್ ಡಬ್ಲು ಮಹಾವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ಬಿಸಿಎ ಮಹಾವಿದ್ಯಾಲಯದ ಆಶ್ರಯದಲ್ಲಿ ೨೦೨೪-೨೫ ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಹಾಗೂ ಬಿಳ್ಕೋಡುವ ಸಮಾರಂಭ ಜರುಗಿತು.

ಭಾರತೀಯ ಸನಾತನ ಪರಂಪರೆಯ ಜಾನಪದ ಸೊಗಡಿನೊಂದಿಗೆ ಜೊಲ್ಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಯವರನ್ನು ಕುಂಕುಮ ಬಟ್ಟು ಇಟ್ಟು ಆರತಿ ಬೆಳಗಿ ಸ್ವಾಗತ ಕೋರಲಾಯಿತು.
ಆರಂಭದಲ್ಲಿ ಪಹಲ್ಗಾಮ ದಾಳಿಯಲ್ಲಿ ಅಗಲಿದ ಭಾರತೀಯರಿಗೆ,ಪಾಕ ಭಾರತ ಯುದ್ಧದ ಸಮಯದಲ್ಲಿ ಹುತಾತ್ಮರಾದ ಯೋಧರಿಗೆ ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರಲಾಯಿತು ತದನಂತರ ಕನ್ನಡ ನಾಡಿನ ನಾಡಗೀತೆ ಜರುಗಿತು ತದನಂತರ ವರದಿ ವಾಚನ ನಡೆಯಿತು ವೇದಿಕೆ ಸವ೯ರನ್ನು ಪುಷ್ಪ ನೀಡಿ ಗೌರವಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಜೊಲ್ಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಮಾಜಿ ಸಚಿವರೂ ನಿಪ್ಪಾಣಿ ಶಾಸಕರಾದ ಶಶಿಕಲಾ ಅ ಜೊಲ್ಲೆ ಅವರು ಪ್ರಸ್ತುತ ದಿನಮಾನಗಳ ವಿಷಯವನ್ನು ಪ್ರಸ್ತಾಪಿಸಿ ಸರಳ ಸಾತ್ವಿಕ ಬದುಕು ಆದರ್ಶ ಬದುಕು.ಹೆತ್ತ ತಂದೆತಾಯಿಗಳು,ಗುರುಗಳೂ,ಗುರುಹಿರಿಯರ ಋಣ ಎಂದಿಗೂ ಮರೆಯಲು ಸಾಧ್ಯವಿಲ್ಲ ಸಂಸ್ಕಾರವಂತ ಮಕ್ಕಳಿಂದ ಮಾತ್ರ ಸುಭದ್ರ ಸಮಾಜ ಕಟ್ಟಲು ಸಾಧ್ಯ ಎಲ್ಲರೂ ದೇಶಾಭಿಮಾನ,ಸರಳ ಜೀ ವಾಹಿನಿ ರೂಢಿಸಿಕೊಂಡು ಆದರ್ಶ ಜೀವನ ಸಾಗಿಸಬೇಕು ಎಂದು ಕರೆ ನೀಡಿ ಕೊನೆಯಲ್ಲಿ ಜಾನಪದ ಗೀತೆ ಹಾಡಿ ಮನರಂಜಿಸಿದರು
ಇದೇ ಸಂದರ್ಭದಲ್ಲಿ ಕರ್ನಾಟಕ ಅಹರ್ತಾ ಪರೀಕ್ಷೆಯಲ್ಲಿ (ಕೆಸೆಟ್) ತೇರ್ಗಡೆಯಾಗಿ ಸಾಧನೆಗೈದ ಡಾ ಅಪ್ಪಾಸಾಹೇಬ ಅಕ್ಕೋಳೆ,ಪ್ರೋ ಮಿಥುನ ಅಂಕಲಿ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಿ ಸನ್ಮಾಸಿದರು ತದನಂತರ ಆದರ್ಶ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬಸವಜ್ಯೋತಿ ಪದವಿ ಮಹಾವಿದ್ಯಾಲಯದ ದೈಹಿಕ ಪ್ರಾಧ್ಯಾಪಕ ಶ್ರೀ ಠೊಂಬರೆ ಬಹುಮಾನ ವಿತರಣೆ ನಡೆಸಿದರೆ ವಾಣಿಜ್ಯ ಪ್ರಾಧ್ಯಾಪಕಿ ಶೃತಿ ನಾಂದನಿ ಆದರ್ಶ ವಿದ್ಯಾರ್ಥಿಗಳ ಹೆಸರನ್ನು ವಿಭಾಗವಾರು ವಾಚಿಸಿದರು ಇಂಗ್ಲೀಷ್ ಪ್ರಾಧ್ಯಾಪಕಿ ಪ್ರೊ ಪ್ರೀಯಾ ಭೋಜೆ ಎಲ್ಲರನ್ನೂ ಸ್ವಾಗತಿಸಿದರೆ ಇತಿಹಾಸ ಪ್ರಾಧ್ಯಾಪಕ ಪ್ರೋ ಎಂ ಎಂ ಪೂಜಾರಿ ವಂದಿಸಿದರು ಕನ್ನಡ ಪ್ರಾಧ್ಯಾಪಕ ಪ್ರೋ ಮಿಥುನ ಅಂಕಲಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಜೊಲ್ಲೆ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿಗಳಾದ ಪ್ರೋ ಎಂ ಎಂ ಪಾಟೀಲ, ಬಸವಜ್ಯೋತಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೋ ರಾಕೇಶ ಮಗದುಮ್ಮ ,ಬಿಎಸ್ ಡಬ್ಲೂ ಮತ್ತು ಎಂ ಎಸ್ ಡಬ್ಲು ಮಹಾವಿದ್ಯಾಲಯ ಪ್ರಾಚಾರ್ಯ ಡಾ ಎ ಬಿ ಅಕ್ಕೋಳೆ, ಬಸವಜ್ಯೋತಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀ ಬನಟ್ಟಿ, ಬಿ ಆರ್ ಅಂಬೇಡ್ಕರ ಬಿಇಡಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ ರವಿ ಕುರಬೆಟ್ಟ ,ಬಿಸಿಎ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ನಿಶಾ ಹಾಗೂ ಎಲ್ಲ ಅಂಗ ಸಂಸ್ಥೆಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು
ಒಟ್ಟಾರೆ ಕಾಯ೯ಕ್ರಮ ಅದ್ದೂರಿಯಾಗಿ ಜರುಗಿತು