ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
“ದಿಯಾ ಆಸ್ಪತ್ರೆಯಲ್ಲಿ ನರರೋಗ ಚಿಕಿತ್ಸಾ ವಿಭಾಗ ಪ್ರಾರಂಭಿಸಲಾಗಿದೆ”
ಗಡಿ ಭಾಗದ ಜನರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವ ಹಾಗೂ ಅನುಕೂಲ ಮಾಡುವ ಉದ್ದೇಶದಿಂದ ಪಟ್ಟಣದಲ್ಲಿರುವ ದಿಯಾ ಆಸ್ಪತ್ರೆಯಲ್ಲಿ ನರರೋಗ ಚಿಕಿತ್ಸಾ ವಿಭಾಗ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಡಾ. ಸಂಜೀವ ಪಾಟೀಲ ತಿಳಿಸಿದರು.
ಈ ಕುರಿತು ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು. ಈಗಾಗಲೆ ದಿಯಾ ಆಸ್ಪತ್ರೆಯಲ್ಲಿ ಎಲುಬು-ಕೀಲು ಮತ್ತು ಸ್ತ್ರೀರೋಗ ವಿಭಾಗ ನಡೆಸಲಾಗುತ್ತಿತ್ತು.
ಆದರೆ ರಸ್ತೆ ಅಪಘಾತವಾದ ಸಂದರ್ಭದಲ್ಲಿ ಒಂದು ಗಂಟೆಯೊಳಗೆ( ಗೊಲ್ಡನ್ ಹವರ್ಸ್) ಸೂಕ್ತ ಚಿಕಿತ್ಸೆ ನೀಡಿದರಷ್ಟೇ ಜೀವ ಉಳಿಯುವ ಸಾಧ್ಯತೆ ಇರುತ್ತದೆ. ಆದರೆ ಚಿಕ್ಕೋಡಿ ಸಮೀಪ ಎಲ್ಲಿಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇರಲಿಲ್ಲ. ಬೆಳಗಾವಿ ಇಲ್ಲವೇ ಕೊಲ್ಲಾಪುರಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು.
ಅದನ್ನು ಗಮನದಲ್ಲಿಟ್ಟುಕೊಂಡು ದಿಯಾ ಆಸ್ಪತ್ರೆಯಲ್ಲಿ
ನರರೋಗದ ವಿಭಾಗ ಆರಂಬಿಸಲಾಗಿದೆ ಎಂದರು
ದಿಯಾ ಆಸ್ಪತ್ರೆಯಲ್ಲಿ ನರರೋಗ ತಜ್ಞರು, ಇಬ್ಬರು ಎಂಡಿ ಫಿಜಿಶಿಯನ್‌ಗಳು, ಮೂವರು ಎಲುಬು-ಕೀಲು ತಜ್ಞ ವೈದ್ಯರು ಇದ್ದು, ದಿನ 24 ತಾಸು ಆರೋಗ್ಯ ಸೇವೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ, ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲ ಅತ್ಯಾಧುನಿಕ ಯಂತ್ರೋಪ ಕರಣಗಳನ್ನು ಹೊಂದಲಾಗಿದೆ,” ಎಂದು ಅವರು ಹೇಳಿದರು. ಡಾ. ಸಂಧ್ಯಾ ಪಾಟೀಲ, ಡಾ. ಶಶಿಕುಮಾರ, ಡಾ. ಸತ್ತಾರ ಖಾನ, ನರಶಸ್ತ್ರಚಿಕಿತ್ಸಾ ತಜ್ಞ , ಮತ್ತಿತರರು ಉಪಸ್ಥಿತರಿದ್ದರು.
+ There are no comments
Add yours