ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲುಕಿನ ಸದಲಗಾ ಪಟ್ಟಣದಲ್ಲಿ ನಗರ ಸಭೆ ಹಾಗೂ ಸಪಲ್ಯ ಸಮಾಜಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ ಯೋಜನೆ ಅಡಿಯಲ್ಲಿ ಜನರಲ್ಲಿ ಪ್ಲಾಸ್ಟಿಕ್ ನಿಷೇಧ, ನೀರಿನ ಮಿತವಾದ ಬಳಕೆ, ಸ್ವಚ್ಛತೆ, ಆರೋಗ್ಯದ ಬಗ್ಗೆ ಬಿದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು.
ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ವಡಗೋಲ್, ಬೈನಾಕವಾಡಿ, ಸದಲಗಾ ಪಟ್ಟಣದಲ್ಲಿ ಹಳೆ ಬಸ್ ಸ್ಟ್ಯಾಂಡ್ ಹಾಗೂ ಅಂಬೇಡ್ಕರ್ ಸಮುದಾಯ ಭವನದಲ್ಲಿ ಈ ಬೀದಿ ನಾಟಕ ಮುಖಾಂತರ ಜನಜಾಗೃತಿ ಮೂಡಿಸಲಾಯಿತು. ಧುಳಗಣವಾಡಿಯ ರಂಗದರ್ಶನ್ ಗ್ರಾಮೀಣ್ ಕಲಾ ಸಂಘದ ಕಲಾವಿದರು ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡನೆ, ನೀರಿನ ಮಿತವಾದ ಬಳಕೆ ಮುಂತಾದ ಬಗ್ಗೆ ಬೀದಿ ನಾಟಕ ಹಾಗೂ ಜಾನಪದದ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸಾಫಲ್ಯ ಸಂಸ್ಥೆ ಅಧ್ಯಕ್ಷ ರಾಜೇಂದ್ರ ಕೋಳಿ, ಕೃಷ್ಣಾ ಬಾಗಡಿ, ಸಂಜಯ ಗುಡೇ, ರೂಪೇಶ್ ಕರಂಗಳೆ, ಡಿ. ಎಸ್. ಹಿರೇಮಠ, ಶಿವಾನಂದ ಪಕಾಲೇ, ಸಮೀರ್ ಮುಜಾವರ್, ಫಕೀರ್ ಕಾಡೆ, ವಿಜಯ ಪಾಟೀಲ್, ರಾಜು ಫಕೀರೇ, ಕಾಕಾಸಾಹೇಬ, ಮಹಂಮಂದಅಲಿ ಗೌಂಡಿ, ಮುಂತಾದವರು ಉಪಸ್ಥಿತರಿದ್ದರು.
+ There are no comments
Add yours