ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕ ಆಡಳಿತ ಹಾಗೂ ತಾಲೂಕ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಆಯೋಜಿಸಿದ ಬೈಕ್ ರ‍್ಯಾಲಿ, ಸಹಿ ಸಂಗ್ರಹಣ ಅಭಿಯಾನ, ಸೆಲ್ಪಿ ಸ್ಟಾö್ಯಂಡ್, ಅಭಿಯಾನಕ್ಕೆ ಶುಕ್ರವಾರ ತಾಲೂಕ ಪಂಚಾಯತ ಆವರಣದಲ್ಲಿ
ಉಪವಿಭಾಗಾಧಿಕಾರಿಗಳಾದ ಶ್ರೀಮತಿ ಮೆಹಿಬೂಬಿ ಚಾಲನೆ ನೀಡಿ; ಚುನಾವಣಾ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ತಾಲೂಕ ಪಂಚಾಯತ ಆವರಣದಿಂದ ಪ್ರಾರಂಭವಾದ ಬೈಕ್ ರ‍್ಯಾಲಿ ಕಡಿಮೆ ಮತದಾನವಿರುವ ನಗರದ ಗಲ್ಲಿಗಳಿಗೆ ಸಂಚರಿಸಿ “ಚುನಾವಣೆ ಪರ್ವ ದೇಶದ ಗರ್ವ” ಘೋಷವಾಕ್ಯದಡಿ ಮತದಾನ ಜಾಗೃತಿ ಮೂಡಿಸಲಾಯಿತು.
ತಾಲೂಕ ಪಂಚಾಯತ ಇಒ ಜಗದೀಶ ಕಮ್ಮಾರ ಮಾತನಾಡಿ ಮತದಾನ ಎಲ್ಲರ ಹಕ್ಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕೆಂಬ ಉದ್ದೇಶದಿಂದ ಬೈಕ್ ರ‍್ಯಾಲಿ ಮೂಲಕ ಮತದಾನ ಅರಿವು ಮೂಡಿಸಲಾಗುತ್ತದೆ.
ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಸ್ವೀಪ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಚಿದಂಬರ ಕುಲಕರ್ಣಿ, ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ, ಪುರಸಭೆಯ ಮುಖ್ಯಾಧಿಕಾರಿಗಳಾದ ಮಾಹಾಂತೇಶ ನಡುವಿನಮನಿ, ಸಹಾಯಕ ನಿರ್ದೇಶಕರಾದ ಎಸ್.ಎಸ್. ಮಠದ, ವ್ಯವಸ್ಥಾಪಕರಾದ ಉದಯಗೌಡ ಪಾಟೀಲ, ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ ಮಟ್ಟದ ಅಧಿಕಾರಿಗಳು ಹಾಗೂ ಸಿಬಂದ್ಧಿಗಳು ಉಪಸ್ಥಿರಿದ್ದರು.
+ There are no comments
Add yours