“ಮಾಂಜರಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ”

Estimated read time 1 min read
Share with Your friends

 ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :-
 
ಪ್ರಜಾಪ್ರಭುತ್ವದ ಆಡಳಿತ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮ ಮೌಲ್ಯಗಳನ್ನು ನೆನಪಿಸುತ್ತದೆ.ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಬಲಪಡಿಸಲು ಜನರು ಮತ್ತು ಸರ್ಕಾರವನ್ನು ಉತ್ತೇಜನಗೊಳಿಸುತ್ತದೆ ಎಂದು ತಾಲುಕಿನ ಮಾಂಜರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷಿ ಪೋತದಾರ ಹೇಳಿದರು 
             ಅವರು ಕಳೆದ  ದಿನಾಂಕ 15 ರಂದು ಮಾಂಜರಿ  ಗ್ರಾಮದ ಶ್ರೀ ಸರ್ವೋದಯ ಶಿಕ್ಷಣ ಸಂಸ್ಥೆ ಹಾಗೂ ಮಾಂಜರಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲಾ ಕಾಲೇಜುಗಳ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
 

        ಈ ಸಂದಭ೯ದಲ್ಲಿ ಸಾಮಾಜಿಕ ಚಿಂತಕರಾದ ಸಿದ್ಧಾರ್ಥ ಗಾಯಗೋಳ ಮಾತನಾಡಿ     ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆಡಳಿತದ ಮಹತ್ವವನ್ನು ಎತ್ತಿ ತೋರಿಸುತ್ತದೆ ಮಾನವ ಹಕ್ಕುಗಳು. ರಕ್ಷಣೆ .ಕಾನೂನ ನಿಯಮ ಮತ್ತು ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರಚಾರ ಒಳಗೊಂಡಿರುವ ಪ್ರಜಾಪ್ರಭುತ್ವದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ ಎಂದರು 
  

ಈ ಸಂದಭ೯ದಲ್ಲಿ ಎಲ್ಲ ವಿದ್ಯಾರ್ಥಿಗಳು  ಮಾನವ ಸರಪಳಿ ನಿರ್ಮಿಸಿ ಸಮಾನತೆಯನ್ನು ತೋರಿದರು ನಂತರ ಗ್ರಾಮದ ಡಾ ಅಂಬೇಡ್ಕರ ಉದ್ಯಾನವನದಲ್ಲಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು
         ಈ ಸಂದಭ೯ದಲ್ಲಿ ಎಲ್ಲಾ ಶಾಲೆಯ ಮುಖ್ಯೋಪಾಧ್ಯರು ಸಹ ಶಿಕ್ಷಕರು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಹಾಗೂ  ಗ್ರಾಮಸ್ಥರು ಉಪಸ್ಥಿತರಿದ್ದರು


Share with Your friends

You May Also Like

More From Author

+ There are no comments

Add yours