ಬೆಂಗಳೂರು :–
ಸೆಪ್ಟೆಂಬರ್ ೧ ರಿಂದ ಎಟಿಎಂ (ATM) ವಹಿವಾಟು
ಶುಲ್ಕಗಳನ್ನು ಹೆಚ್ಚಿಸುವಲ್ಲಿ ಕೆನರಾ ಬ್ಯಾಂಕ್ ಕೂಡ
ಎಸ್‌ಬಿಐ (SBI) ಹಾದಿಯನ್ನು ಅನುಸರಿಸಿದೆ. ಬ್ಯಾಂಕ್‌ನ
ಸ್ವಂತ ಎಟಿಎಂಗಳಲ್ಲಿನ ಉಚಿತ ವಹಿವಾಟುಗಳ
ಸಂಖ್ಯೆಯನ್ನು ಪ್ರತಿ ಕ್ಯಾಲೆಂಡರ್ ತಿಂಗಳಿಗೆ ಆರರಿಂದ
ಐದಕ್ಕೆ ಇಳಿಸಲಾಗಿದೆ. ಹಿರಿಯ ನಾಗರಿಕರಿಗೆ ಮಾತ್ರ
ತಿಂಗಳಿಗೆ ಎಂಟು ಉಚಿತ ವಹಿವಾಟುಗಳ ಸೌಲಭ್ಯ
ಮುಂದುವರಿಯಲಿದೆ. ಇನ್ನು ಮುಂದೆ ನಗದು
ಹಿಂಪಡೆಯುವಿಕೆಗೆ ಪ್ರತಿ ವಹಿವಾಟಿಗೆ ₹೨೦+GST ಬದಲಾಗಿ
₹೨೩+GST ಶುಲ್ಕ ವಿಧಿಸಲಾಗುತ್ತದೆ.




