*ಭಿಕ್ಷುಕನ ವೇಷ ಧರಿಸಿ ತಿರುಗಿದ ಮುಂಬೈನ ಕೋಟ್ಯಧಿಪತಿ ಬಿಜೆಪಿ ಶಾಸಕ ಪರಾಗ್ ಶಾ*

ಬೆಳಗಾವಿ :–

ಮಹಾರಾಷ್ಟ್ರ ರಾಜ್ಯದ ಮುಂಬೈನ ಘಾಸ್ಕೋಪರ್ ಈಸ್ಟ್ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ, ತಮ್ಮ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಭಿಕ್ಷುಕನ ವೇಷ ಧರಿಸಿ ಬೀದಿ, ರಸ್ತೆ ರಸ್ತೆಗಳಲ್ಲಿ ಭಿಕ್ಷೆ ಬೇಡಿದ್ದಾರೆ.

ಜೈನ ಧರ್ಮದ ಚಾತುರ್ಮಾಸದ ಅಂಗವಾಗಿ ಆತ್ಮಾನುಭವ ಪಡೆಯಲು ಅವರು ಈ ರೀತಿ ಮಾಡಿದ್ದು, ಮುಖಕ್ಕೆ ವಿಶೇಷ ಮೇಕಪ್ ಮಾಡಿಕೊಂಡು,

ಹರಿದ-ಸಾಧಾರಣ ಬಟ್ಟೆಗಳನ್ನು ಧರಿಸಿ ಭಿಕ್ಷುಕನ ರೂಪ ತಳೆದಿದ್ದರು. ಜನರಿಂದ ಸಿಕ್ಕ ಭಿಕ್ಷೆಯ ಹಣ ಹಾಗೂ ಆಹಾರವನ್ನೇ ಸೇವಿಸಿದ ಅವರು, ಭಿಕ್ಷುಕನ ಕಷ್ಟಗಳನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page