“ಸಿ. ಬಿ. ಕೋರೆ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನವನ್ನು “ನೀರು ಮತ್ತು ನೈರ್ಮಲ್ಯ ಬಿಕ್ಕಟ್ಟನ್ನು ಪರಿಹರಿಸಲು ಬದಲಾವಣೆಯನ್ನು ವೇಗಗೊಳಿಸುವ” ಧ್ಯೇಯವಾಕ್ಯದೊಂದಿಗೆ ಆಚರಣೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲೇದಾರ

ಚಿಕ್ಕೋಡಿ :–

ಕೆ. ಎಲ್. ಇ. ಸಂಸ್ಥೆಯ ಸಿ. ಬಿ. ಕೋರೆ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ೫ ಜೂನ್ ೨೦೨೩ ರಂದು ವಿಶ್ವ ಪರಿಸರ ದಿನವನ್ನು “ನೀರು ಮತ್ತು ನೈರ್ಮಲ್ಯ ಬಿಕ್ಕಟ್ಟನ್ನು ಪರಿಹರಿಸಲು ಬದಲಾವಣೆಯನ್ನು ವೇಗಗೊಳಿಸುವ” ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜಿನ ಉದ್ಯಾನವನದಲ್ಲಿ ಪ್ರಾಚಾರ್ಯರು ಪ್ರೋ. ದರ್ಶನ್ ಕುಮಾರ್ ಬಿಳ್ಳೂರ ಅವರು ಸಸಿಗಳನ್ನು ನೆಟ್ಟರು, ವಿವಿಧ ವಿಭಾಗದ ಮುಖ್ಯಸ್ಥರು ಭೋದಕ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಪಾಲುಗೊಂಡರು.

ಕಾಲೇಜಿನ ಪ್ರಾಚಾರ್ಯರು ತಮ್ಮ ಭಾಷಣದಲ್ಲಿ ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ಪರಿಸರದ ಬಗ್ಗೆ ಪ್ರತಿ ಮನುಷ್ಯನನ್ನು ಜಾಗೃತಿ ಮೂಡಿಸುವುದು ಮತ್ತು ಸಂರಕ್ಷಣೆ ಮಾಡುವುದು ಎಂದು ಹೇಳಿದರು ಮತ್ತು ನೀರು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯುತ್ತಮ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಭದ್ಧರಾಗಲು ಮತ್ತು ಕಡಿಮೆ ವಿದ್ಯುತ್ ಬಳಕೆ ಹಾಗೂ ನೆರೆ ಹೊರೆಯಲ್ಲಿ ಹೊಸ ಗಿಡಗಳನ್ನು ನೆಡುವುದರ ಮೂಲಕ ಪರಿಸರದ ಬಗ್ಗೆ ನಿಮ್ಮ ಕಾಳಜಿಯನ್ನು ತೊರಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.


Share with Your friends

You May Also Like

More From Author

+ There are no comments

Add yours