“ಸಿ.ಬಿ.ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ”

Estimated read time 1 min read
Share with Your friends

ಬೀಳ್ಕೋಡುವ ಸಮಾರಂಭ

ಚಿಕ್ಕೋಡಿ: ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಂಡರೆ, ಯಶಸ್ಸು ಸಾಧಿಸಲು ಸಾಧ್ಯವೆಂದು ಶ್ರೀ. ಉದಯ ಆಡಗೌಡ ಪಾಟೀಲ ಹೇಳಿದರು. ನಗರದ ಕೆ. ಎಲ್. ಇ. ಸಿ. ಬಿ. ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಧ್ಯಾಹ್ನದ ಅವಧಿಯಲ್ಲಿ ಶ್ರೀ. ಆನಂದ ಅರವಾರೆಯವರು ವಯಸ್ಸು ಯಶಸ್ಸಿಗೆ ಅಡ್ಡಿಯಾಗಬಾರದೆಂದು, ಕಲಿಕೆಯು ನಿರಂತರವಾಗಿರಬೇಕೆAದು ಹೇಳಿ ಮಧ್ಯಾಹ್ನದ ಬೀಳ್ಕೋಡುಗೆ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಬೋದಕ, ಬೋದಕೇತರ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ|| ದರ್ಶನಕುಮಾರ ಬಿಳ್ಳೂರರವರು ಸ್ಫರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನೆನಪಿನ ಕಾಣ ಕೆಗಳನ್ನು ನೀಡಲಾಯಿತು.


Share with Your friends

You May Also Like

More From Author

+ There are no comments

Add yours