“ಕನ್ನಡಭಾಷೆ ಕಲಾ ಸಂಸ್ಕೃತಿನಮ್ಮ ನಾಡಿನ ಹಿರಿಮೆ ಗರಿಮೆ ಹೆಚ್ಚಿಸುತ್ತವೆ ನಮ್ಮ ನಾಡಿನ ಕಲಾವಿದರು ತಮ್ಮ ಕಲಾಪ್ರದರ್ಶನ ಮುಖಾಂತರ  ಕನ್ನಡಭಾಷೆ ಉಳಿಸುವಲ್ಲಿ ಪ್ರಮುಖ ಪಾತ್ರ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕನ್ನಡಭಾಷೆ ಕಲಾ ಸಂಸ್ಕೃತಿನಮ್ಮ ನಾಡಿನ ಹಿರಿಮೆ ಗರಿಮೆ ಹೆಚ್ಚಿಸುತ್ತವೆ ನಮ್ಮ ನಾಡಿನ ಕಲಾವಿದರು ತಮ್ಮ ಕಲಾಪ್ರದರ್ಶನ ಮುಖಾಂತರ  ಕನ್ನಡಭಾಷೆ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಅಂತಹ ನಮ್ಮ ನಾಡಿನ ಶ್ರೀಮಂತ ಕನ್ನಡ ಬಾಷೆ ಕಲಾಸಂಸೃತಿ ಉಳಿಸಲು  ಪ್ರತಿಯೊಬ್ಬರು ಅಂತರಗದಿಂದ ತಾಯ್ನಾಡಿನ ಋಣ ತಿರಿಸಬೆಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿದೇರ್ಶಕರಾದ ವಿದ್ಯಾವತಿ ಹೆಚ್.ಬಿ ಇವರು ನಾಡು ನುಡಿ ಕುರಿತು ಅಭಿವ್ಯಕ್ತ ಪಡಿಸಿದರು ಅವರು ಕಳೆದ 9 ರಂದು ಬಸವರಾಜ ಕಟ್ಟಿಮನಿ ಟ್ರಸ್ಟ ಸಭಾ ಭವನದಲ್ಲಿ  ಕರ್ನಾಟಕ ಗಡಿಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಐಸಿರಿ ಪಬ್ಲಿಕ್‌ ಚಾರಿಟೇಬಲ್‌ ಟ್ರಸ್ಟ ಬೆಳಗಾವಿ ಇವರ ಸಹಯೋಗದಲ್ಲಿ ಆಯೋಜಿಸಿದ ಗಡಿ ಸಾಂಸ್ಕೃತಿಕ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.   

ಸಮಾರಂಭದ ಅಧ್ಯಕ್ಷತೆ ವಹಿಸಿದ ರಾಷ್ಟ್ರ ಪ್ರಸಸ್ತಿ ವಿಜೇತ ನಿವೃತ ಶಿಕ್ಷಕರು ಹಿರಿಯ ಸಾಹಿತಿಗಳಾದ ಎ.ಎ ಸನದಿ ಇವರು ಮಾತನಾಡಿ ಗಡಿನಾಡಿನಲ್ಲಿ ಕನ್ನಡ ಬಾಷೆ ಸಂಸೃತಿ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಜಾಗೃತ ವಹಿಸಬೇಕು ಕನ್ನಡ ಬಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ನಮ್ಮ ನಾಡಿನ ಸಾಹಿತಿ ಕವಿಗಳು ಕನ್ನಡ ಪರ ಚಿಂತಕರು ಕಟ್ಟಿ ಬೆಳೆಸಿದ ನಾಡು ಯಾವಾಗಲೂ ಕನ್ನಡಮಯವಾಗಿರಬೇಕೆಂದರು. ವೇದಿಕೆ ಮೇಲೆ ದೂರದರ್ಶನ ಕಲಾವಿದರಾದ ಈಶ್ವರಚಂದ್ರ ಬೇಟಿಗೇರಿ, ಮಹಾದೇವ ಅಲಾಸೆ ಉಪಸ್ಥಿತರಿದ್ದರು. 

       ಕಾರ್ಯಕ್ರಮದ ಅಂಗವಾಗಿ ವಿಚಾರ ಸಂಕಿರಣ, ಕವಿಗೋಷ್ಠಿ ವಿವಿಧ ಕಲಾತಂಡದವರಿಂದ ಜಾನಪದಗೀತೆ, ಭರತನಾಟ್ಯ, ತತ್ವಪದ, ಭಜನಾಪದ, ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯ ಸಣ್ಣಾಟ,  ಕಲಾವಿದರು ಕಾರ್ಯಕ್ರಮಕ್ಕೆ ಮೆರಗು ನೀಡಿದರು. 

  ಇದೇ ಸಂದರ್ಭದಲ್ಲಿ ಕಲಾಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು ಸಂಸ್ಥೆಯ ಅಧ್ಯಕ್ಷರದಾ ಅಂನತ ಕುಮಾರ ಬ್ಯಾಕುಡ ಇವರು  ಪ್ರಾಸ್ತಾವಿಕವಾಗಿ ಮಾತನಾಡಿದರು ಸುನೀತಾ ದೇಸಾಯಿ ಕಾಯಕ್ರಮ ನಿರೂಪಿಸಿದರು. ನಾಗರಾಜ ಮಾಲಗತ್ತೆ ಸ್ವಾಗತಿಸಿ ವಂದಿಸಿದರು.  


Share with Your friends

You May Also Like

More From Author

+ There are no comments

Add yours