“ಮಹಾರಾಷ್ಟ್ರದಿಂದ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಒಬ್ಬನ ಬ್ಯಾಗನಲ್ಲಿ ದಾಖಲೆ ಇಲ್ಲದ ರೂ.೧೪ ಲಕ್ಷ ನಗದು ವಶ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ದಿನದ ೨೪ ಗಂಟೆಯು ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಇಂದು ದಿನಾಂಕ: ೨೧.೦೩.೨೦೨೪ ರಂದು ಮುಂಜಾನೆ ಸುಮಾರು ೨:೦೦ ಗಂಟೆಯ ಸಮಯದಲ್ಲಿ ಮಹಾರಾಷ್ಟ್ರದಿಂದ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಒಬ್ಬನ ಬ್ಯಾಗನಲ್ಲಿ ದಾಖಲೆ ಇಲ್ಲದ ರೂ.೧೪ ಲಕ್ಷ ನಗದನ್ನು ಮಲ್ಲಪ್ಪಾ ದತ್ತವಾಡೆ ಎಸ್.ಎಸ್.ಟಿ. ಪರಿಶೀಲನಾ ತಂಡವು ವಶಪಡಿಸಿಕೊಂಡಿದೆ. ಸದರಿ ವ್ಯಕ್ತಿಯ ಮೇಲೆ ಎಫ್ ಆಯ್ ಆರ್ ದಾಖಲಿಸಿ ಪೋಲಿಸ ಕಾನೂನುಗಳ ಅಡಿಯಲ್ಲಿ ಮತ್ತು ಆದಾಯ ತೆರಿಗೆ ಕಾನೂನುಗಳ ಅನ್ವಯ ಕ್ರಮವಹಿಸಲಾಗಿದೆ. ಸದರಿ ಚೆಕ್ ಪೋಸ್ಟನಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದು ಶ್ರೀ ಸತ್ಯನಾರಾಯಣ ಭಟ್ಟ, ಸಹಾಯಕ ಚುನಾವಣಾಧಿಕಾರಿಗಳು ನಿಪ್ಪಾಣಿ ರವರು ತಿಳಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರೂ. ೫೦ ಸಾವಿರಕ್ಕಿಂತ ಹೆಚ್ಚಿನ ನಗದನ್ನು ಸೂಕ್ತ ದಾಖಲೆಗಳಿಲ್ಲದೆ ಸಾರ್ವಜನಿಕರು ಸಾಗಾಟ ಮಾಡಬಾರದೆಂದು ತಿಳಿಸಿದರು.


Share with Your friends

You May Also Like

More From Author

+ There are no comments

Add yours