ರಾಹುಲ ಶಿಂಧೆ ಅವರಿಂದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ(ಮೇ.6) :–

ಲೋಕಸಭಾ ಚುನಾವಣೆ-2024 ಕ್ಕೆ ಸಂಬAಧಿಸಿದAತೆ ಮೇ. 7 ರಂದು ಜರುಗಲಿರುವ ಮತದಾನದ ಹಿನ್ನಲೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ 8 ವಿಧಾನ ಸಭಾ ಮತಕ್ಷೇತ್ರಗಳಲ್ಲಿ ಮಸ್ಟರಿಂಗ ಕೇಂದ್ರಗಳನ್ನು ತೆರಯಲಾಗಿರುತ್ತದೆ. ಹುಕ್ಕೇರಿಯ ಎಸ್.ಕೆ.ಪಿಯು ಕಾಲೇಜು, ಅಥಣಿಯ ಎಸ್.ಎಸ್.ಎಂ.ಎಸ್, ಕಾಗವಾಡದ ಶಿವಾನಂದ ಪಿ.ಯು ಕಾಲೇಜು ಹಾಗೂ ರಾಯಬಾಗದ ಮಹಾವೀರ ಶಾಲೆಯಲ್ಲಿನ ಮಸ್ಟರಿಂಗ್ ಕೇಂದ್ರಗಳಿಗೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ಸೋಮವಾರ (ಮೇ.6) ರಂದು ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿ ಸಿಬ್ಬಂದಿಯವರೊಡನೆ ಮಾತನಾಡಿದ ಅವರು ಮತಗಟ್ಟೆ ಅಧಿಕಾರಿ ಸಿಬ್ಬಂದಿಗಳು ಚುನಾವಣಾ ಆಯೋಗದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಲೋಪಗಳಾಗದಂತೆ ಅತೀ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಕ್ಕೇರಿ, ಅಥಣಿ, ರಾಯಬಾಗ, ಕಾಗವಾಡ ವಿಧಾನ ಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours