
ಇ.ಸ್ವತ್ತು ಉತಾರ ಮಾಡಿಸುವದರಿಂದ ಮೈಕ್ರೋ ಪೈನಾನ್ಸ್ ಗಳ ಹಾವಳಿಯಿಂದ ನಾಗರಿಕರನ್ನು ಪಾರು ಮಾಡಬಹುದು – ರಾಹುಲ್ ಶಿಂಧೆ
ಚಿಕ್ಕೋಡಿ :– ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಚಿಕ್ಕೋಡಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಬೇಟಿ ನೀಡಿದರು ಇ- ಸ್ವತ್ತು ಉತಾರ ಮಾಡಿಸುವದರಿಂದ ಮೈಕ್ರೋ ಪೈನಾನ್ಸ್ ಗಳ ಹಾವಳಿಯಿಂದ ನಾಗರಿಕರನ್ನು ಪಾರು ಮಾಡಬಹುದು. ಇ- ಸ್ವತ್ತು ಉತಾರ ಪಡೆದ ಫಲಾನುಭವಿಗಳು ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಸುಲಭವಾಗಿ ಸಾಲಸೌಲಭ್ಯ ದೊರೆಯುತ್ತದೆ ಕಾರಣ ಎಲ್ಲಾ ಗ್ರಾಮ ಪಂಚಾಯತ ಸದಸ್ಯರು ಶ್ರಮಿಸಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ತಿಳಿಸಿದರು. ತಾಲೂಕಿನ ಖಡಕಲಾಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಬ್ಲ್ಯೂ.ಟಿ.ಪಿ ವಾಟರ ಸಪ್ಲಾಯಗೆ ಭೇಟಿ ನೀಡಿ ಪರಿಶೀಲಿಸಿದರು. ಖಡಕಲಾಟ ಗ್ರಾಮ ಪಂಚಾಯತಿ ವ್ತಾಪ್ತಿಯ ಪೀರನವಾಡಿ ಗ್ರಾಮದಲ್ಲಿನ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಅಪೂರ್ಣವಾಗಿದ್ದು ಅದನ್ನು ಪೂರ್ಣಗೊಳಿಸಲು ಕಾರ್ಯಪಾಲಕ ಅಭಿಯಂತರರು ಗ್ರಾ.ಕು.ನೀ & ನೈ ಇಲಾಖೆ ಚಿಕ್ಕೋಡಿ ವಿಭಾಗ ಹಾಗೂ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು. ಮನರೇಗಾ ಯೋಜನೆಗೆ ಸಂಬಂಧಿಸಿದಂತೆ ಖಡಕಲಾಟ, ಪಟ್ಟಣಕುಡಿ ಮತ್ತು ವಾಳಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮುದಾಯ ಕುಡಿಯುವ ನೀರಿನ ಬಾವಿಗೆ ಬೇಡಿಕೆ ಇದ್ದು, ಅಂತಹ ಗ್ರಾಮ ಪಂಚಾಯತಿಗಳ ಕ್ರಿಯಾ ಯೋಜನೆಯನ್ನು ಕೂಡಲೇ ಸಿದ್ದಪಡಿಸಿ, ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆದುಕೊಂಡು ತ್ವರಿತವಾಗಿ ಕಾಮಗಾರಿಯನ್ನು ಪ್ರಾರಂಭಿಸಲು ಕಾರ್ಯನಿರ್ವಾಹಕ ಅಧಿಕಾರಿಗಳು ಚಿಕ್ಕೋಡಿ ತಾಲೂಕ ಪಂಚಾಯತರವರಿಗೆ ಸೂಕ್ತ ನಿರ್ದೇಶನ ನೀಡಿದರು.