“ಚಿಕ್ಕೋಡಿ-ಸದಲಗಾ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗೆ ಗಣೇಶ ಹುಕ್ಕೇರಿಯವರಗೆ ಮತ್ತೊಮ್ಮೆ ಅವಕಾಶ ಕೊಡಿ” – ಸದಸ್ಯ ಪ್ರಕಾಶ ಹುಕ್ಕೇರಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಿ

ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಶಾಸಕ ಗಣೇಶ ಹುಕ್ಕೇರಿಯವರು ಸ್ಪರ್ಧಿಸಿದ್ದು, ನಾನು ಹಾಗೂ ಅಭ್ಯರ್ಥಿ ಗಣೇಶ ಹುಕ್ಕೇರಿಯವರು ಸರಕಾರದ ಬಹುತೇಕ ಎಲ್ಲಾ ಯೋಜನೆಗಳನ್ನು ಮತದಾರ ಮನೆ-ಮನೆಗೆ ಪ್ರಾಮಾಣಿಕವಾಗಿ ಮುಟ್ಟಿಸಿ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸಿದ್ದು, ಮಾದರಿ ಸರ್ವಾಂಗೀಣ ಅಭಿವೃದ್ಧಿಗೆ ಗಣೇಶ ಹುಕ್ಕೇರಿಯವರಗೆ ಮತ್ತೊಮ್ಮೆ ಅವಕಾಶ ಕೊಡಿ ಎಂದು ವಿ.ಪ. ಸದಸ್ಯ ಪ್ರಕಾಶ ಹುಕ್ಕೇರಿ ಮನವಿ ಮಾಡಿಕೊಂಡರು.

ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಪಾಂಗೇರಿ, ರಾಂಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿಯವರ ಪ್ರಚಾರಾರ್ಥವಾಗಿ ಏರ್ಪಡಿಸಿದ್ದ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಮತ್ತು ಪ್ರವಾಹದಂತಹ ಸಂಕಟ ಸಂದರ್ಭದಲ್ಲಿ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇವೆ. ನಾವು ಚುನಾವಣೆಗಳು ಬಂದಾಗ ಮಾತ್ರ ಬರುವವರಲ್ಲ. ನಾವು ನಿರಂತರ ಸೇವೆ ಮಾಡುತ್ತಿರುವುದು ತಮಗೆಲ್ಲರಿಗೂ ಗೊತ್ತಿದ್ದ ಸಂಗತಿಯಾಗಿದ್ದು, ಚುನಾವಣೆಗಳು ಬಂದಾಗ ಮಾತ್ರಬರುವವರನ್ನು ದೂರವಿಟ್ಟು, ನಿಮ್ಮ ಭಾಗಿಯಾಗುವವರನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಅಭ್ಯರ್ಥಿ ಗಣೇಶ ಹುಕ್ಕೇರಿಯವರು ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ

ಎರಡುಬಾರಿ ಶಾಸಕರಾಗಿ ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ತಂದು ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದು, ಕ್ಷೇತ್ರದಲ್ಲಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ, ರಸ್ತೆ ಕಾಮಗಾರಿ, ಸೇತುವೆ ಮತ್ತು ಬಾಂದಾರಗಳ ನಿರ್ಮಾಣ, ಕುಡಿಯುವ ನೀರಿನ ಯೋಜನೆ, ಸಮುದಾಯ ಭವನಗಳು, ದೇವಸ್ಥಾನ ಕಟ್ಟಡಗಳ ಜೀರ್ಣೋದ್ಧಾರ, ಅಲ್ಪಸಂಖ್ಯಾತರ ಸಮುದಾಯ ಭವನ, ಆಶ್ರಯ ಮನೆಗಳ ಮಂಜೂರು, ರೋಗಿಗಳಿಗೆ ಪರಿಹಾರ ನೀಡಿ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅನುಕೂಲ ಕಲ್ಪಿಸಿಕೊಟ್ಟಿದ್ದು, ವಿಧಾನಸಭಾ ಚುನಾವಣೆಯಲ್ಲಿ ಗಣೇಶ ಹುಕ್ಕೇರಿಯವರು ಶಾಸಕನಾಗಿ ಹ್ಯಾಟ್ರಿಕ್ ಗೆಲವು ಸಾಧಿಸಲು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸುವಂತೆ ಮನವಿಯನ್ನು ಮಾಡಿಕೊಂಡರು. ರಾವ್‌ ಸಾಬ ಪಾಟೀಲ, ನೀರೇಂದ್ರ ಪಾಟೀಲ, ಮನೋಜ ಪಾಟೀಲ, ಸುನೀಲ ಶಿತೋಳೆ, ರಾಜು ಪಾಟೀಲ, ಸುಂದರ ಪಾಟೀಲ, ವಿಪುಲ್ ಪಾಟೀಲ, ಕಷ್ಟಗಳಲ್ಲಿ ವಿಶ್ವಜೀತ ಪಾಟೀಲ, ಸಚಿನ ಪವಾರ, ಸುರಜ ಕುಂಬಾರ, ಶಶಿ ಈಸರೆ, ಅನ್ನಾ ತಾಂದಳೆ, ಕುಮಾರ ಜಾಧವ ಸೇರಿದಂತೆ ಗ್ರಾಮಸ್ಥರು ಮುಖಂಡರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours