ಬಿಗ್ ಬಾಸ್ ಕನ್ನಡ ನಿರೂಪಣೆಗೆ ವಿದಾಯ ಘೋಷಿಸಿದ ಕಿಚ್ಚ ಸುದೀಪ್!

ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕನ್ನಡ ಆವೃತ್ತಿ ನಿರೂಪಣೆಯಿಂದ ನಟ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ.

ಭಾನುವಾರ ಟ್ವೀಟ್ ಮಾಡಿರುವ ಅವರು ಬಿಗ್ ಬಾಸ್ 11ರ ಆವೃತ್ತಿ ನನ್ನ ಕೊನೆಯದಾಗಿದ್ದು, ಜನರ ಪ್ರೀತಿಗೆ ಪಾತ್ರವಾಗಿರುವ ಬಿಗ್ ಬಾಸ್ ಅನ್ನು ಈ ಬಾರಿ ಅತ್ಯುತ್ತಮವಾಗಿ ಮುಗಿಸೋಣ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆದಾಗಿನಿಂದ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸುದೀಪ್, ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಆಗಿದೆ. 10+1 ವರ್ಷದಿಂದ ನಡೆಸಿಕೊಂಡು ಬಂದ ಶೋಗೆ ಈ ಬಾರಿ ಅತೀ ಹೆಚ್ಚು ಟಿಆರ್ ಪಿ ಬಂದಿರುವುದೇ ಸಾಕ್ಷಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಸಾಗಲಿ ಎಂದು ಹೇಳಿದ್ದಾರೆ.

ಸುದೀಪ್ ಈ ಬಾರಿ ಬಿಗ್ ಬಾಸ್ ನಡೆಸಿಕೊಡುವುದೇ ಅನುಮಾನ ಎಂಬ ಚರ್ಚೆಗಳು ನಡೆದಿದ್ದವು. ಸಂಭಾವನೆ ವಿಷಯದಲ್ಲಿ ಸುದೀಪ್ ಮತ್ತು ಬಿಗ್ ಬಾಸ್ ಸಂಘಟಕರಲ್ಲಿ ಹೊಂದಾಣಿಕೆ ಆಗಿರಲಿಲ್ಲ. ಆದರೆ ಕೊನೆಯ ಗಳಿಗೆಯಲ್ಲಿ ಸುದೀಪ್ ಈ ಬಾರಿಯೂ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದರು.

Share this post:

Leave a Reply

Your email address will not be published. Required fields are marked *