ಏರ್ ಇಂಡಿಯಾಗೆ ಹುಸಿಬಾಂಬ್ ಕರೆ: 3 ದಿನದಲ್ಲಿ 12 ವಿಮಾನ ಮಾರ್ಗ ಬದಲು

ಹುಸಿ ಬಾಂಬ್ ಬೆದರಿಕೆಗಳಿಂದ ಏರ್ ಇಂಡಿಯಾ ವಿಮಾನ ಸಂಸ್ಥೆ ತತ್ತರಿಸಿದ್ದು, ಕಳೆದ ಮೂರು ದಿನದಲ್ಲಿ 12 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಮಂಗಳವಾರ ಒಂದೇ ದಿನದಲ್ಲಿ ಹುಸಿಬಾಂಬ್ ಬೆದರಿಕೆಯಿಂದ 7 ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ಕಳೆದ 48 ಗಂಟೆಗಳಲ್ಲಿ ಈ ರೀತಿ ಬಾಂಬ್ ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ 10 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬುಧವಾರ ಮತ್ತೆ ಹುಸಿ ಬಾಂಬ್ ಬೆದರಿಕೆಯಿಂದ ಮೂರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಮುಂಬೈನಿಂದ ಚಿಕಾಗೊಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನವನ್ನು ಕೆನಡಾದ ಗ್ರಾಮೀಣ ಪ್ರದೇಶವಾದ ಇಲ್ಕುತ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಗಿದೆ.

ಸೋಮವಾರ 2 ಇಂಡಿಗೊ ಹಾಗೂ ಒಂದು ಏರ್ ಇಂಡಿಯಾ ವಿಮಾನಗಳ ಸಂಚಾರ ಮಾರ್ಗ ಬದಲಾಯಿಸಲಾಗಿತ್ತು. ಇದೀಗ ಮಂಗಳವಾರ ಒಂದೇ ದಿನ 7 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಇಂದು, ಏರ್ ಇಂಡಿಯಾ ದೆಹಲಿ-ಚಿಕಾಗೋ ವಿಮಾನ, ದಮ್ಮಾಮ್-ಲಕ್ನೋ ಇಂಡಿಗೋ ವಿಮಾನ, ಅಯೋಧ್ಯೆ-ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್, ದರ್ಭಾಂಗಾದಿಂದ ಮುಂಬೈಗೆ ಸ್ಪೈಸ್‌ಜೆಟ್ ವಿಮಾನ (SG116), ಬಾಗ್ಡೋಗ್ರಾದಿಂದ ಬೆಂಗಳೂರಿಗೆ ಆಕಾಶ ಏರ್ ವಿಮಾನ (QP 1373), ಅಲಯನ್ಸ್ ಏರ್ ಅಮೃತಸರ -ಡೆಹ್ರಾಡೂನ್-ದೆಹಲಿ ವಿಮಾನ (9I 650) ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 684) ಮಧುರೈನಿಂದ ಸಿಂಗಾಪುರ ವಿಮಾನಗಳ ಮೇಲೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

Share this post:

Leave a Reply

Your email address will not be published. Required fields are marked *