ಬೆಂಗಳೂರು ಟೆಸ್ಟ್: 46 ರನ್ ಗೆ ಆಲೌಟಾದ ಭಾರತ ತವರಿನಲ್ಲಿ ಕಳಪೆ ದಾಖಲೆ!

ನ್ಯೂಜಿಲೆಂಡ್ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಭಾರತದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ತಂಡ 46 ರನ್ ಗೆ ಆಲೌಟಾಗಿದೆ. ತವರಿನಲ್ಲಿ ಭಾರತ ತಂಡ ದಾಖಲಿಸಿದ ಅತ್ಯಂತ ಕಳಪೆ ಮೊತ್ತವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಿಂದ ಮೊದಲ ದಿನದಾಟ ರದ್ದಾಗಿದ್ದರಿಂದ ಪಂದ್ಯದ ಎರಡನೇ ದಿನವಾದ ಗುರುವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 31.2 ಓವರ್ ಗಳಲ್ಲಿ 46 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತ ತಂಡ ತವರಿನಲ್ಲಿ ದಾಖಲಿಸಿದ ಅತ್ಯಂತ ಕಳಪೆ ಮೊತ್ತ ಹಾಗೂ ಒಟ್ಟಾರೆ ಮೂರನೇ ಅತ್ಯಂತ ಕಳಪೆ ಮೊತ್ತವಾಗಿದೆ.

ನ್ಯೂಜಿಲೆಂಡ್ ಪರ ಮಾರ್ಕ್ ಹೆನ್ರಿ 5 ವಿಕೆಟ್ ಗೊಂಚಲು ಪಡೆದಿದ್ದೂ ಅಲ್ಲದೇ ಟೆಸ್ಟ್ ಕ್ರಿಕೆಟ್ ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ವಿಲಿಯಮ್ ಓರೊರ್ಕಿ ಪ್ರಮುಖ 4 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು. ಕಿವೀಸ್ ಬೌಲಿಂಗ್ ಎಷ್ಟು ತೀಕ್ಷ್ಣವಾಗಿತ್ತು ಅಂದರೆ ತಂಡ ಕೇವಲ ಮೂವರು ಬೌಲರ್ ಬಳಸಿ ಭಾರತ ತಂಡ 10 ವಿಕೆಟ್ ಕಬಳಿಸಿತು.

ಭಾರತದ ಬ್ಯಾಟಿಂಗ್ ಬೆನ್ನೆಲುಬು ಆದ ವಿರಾಟ್ ಕೊಹ್ಲಿ (0), ಕೆಎಲ್ ರಾಹುಲ್ (0), ಸರ್ಫರಾಜ್ ಖಾನ್ (0), ರವೀಂದ್ರ ಜಡೇಜಾ (0) ಮತ್ತು ಆರ್.ಅಶ್ವಿನ್ (0) ಶೂನ್ಯಕ್ಕೆ ಔಟಾದರೆ, ನಾಯಕ ರೋಹಿತ್ ಶರ್ಮ (2) ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಆರಂಭಿಕ ಯಶಸ್ವಿ ಜೈಸ್ವಾಲ್ (13) ಮತ್ತು ರಿಷಭ್ ಪಂತ್ (20) ಮಾತ್ರ ಎರಡಂಕಿಯ ಮೊತ್ತ ಕಲೆ ಹಾಕಿದರು.

Share this post:

Leave a Reply

Your email address will not be published. Required fields are marked *