BEWARE..! OWNERS OF ILLEGAL BUILDINGS… ಅಕ್ಟೋಬರ್ 26 ರಿಂದಲೇ ನಿರ್ಮಾಣ ಹಂತದ ಅಕ್ರಮ ಕಟ್ಟಡಗಳ ಸರ್ವೆ…1712 ಒತ್ತುವರಿ ಕಟ್ಟಡಗಳಿಗೆ ಕಾದಿದೆ ಡೆಮಾಲಿಷನ್ ಭೀತಿ..

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿರುವವರಿಗೆ ಬಿಬಿಎಂಪಿ ಕೊನೆಯ ವಾರ್ನಿಂಗ್ ನೀಡಿದೆ.ಎಚ್ಚರಿಕೆ ಹೊರತಾಗಿಯೂ ಅಕ್ರಮ ಕಟ್ಟಡ ನಿರ್ಮಿಸುವುದನ್ನು ಮುಂದುವರೆ ಸಿದರೆ ಪರಿಣಾಮ ನೆಟ್ಟಗಿರೊಲ್ಲ ಎನ್ನುವ ಎಚ್ಚರಿಕೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ನೀಡಿದ್ದಾರೆ.ಅಕ್ರಮ ಕಟ್ಟಡಗಳ ಸರ್ವೆಯನ್ನು ಸೋಮವಾರದಿಂದಲೇ ಆರಂಭಿಸಲಾಗುತ್ತಿದ್ದು ಸರ್ವೆ ವೇಳೆ ಕಂಡುಬರುವ ಉಲ್ಲಂಘನೆಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಕೆಲಸ ಮಾಡುವುದಾಗಿ ತುಷಾರ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.

ಬಾಬುಸಾಬ್ ಪಾಳ್ಯದ ಕಟ್ಟಡ ದುರಂತ ಬರೋಬ್ಬರಿ ಒಂಬತ್ತು ಅಮಾಯಕ-ನಿಷ್ಪಾಪಿ ಕಾರ್ಮಿಕರ ಜೀವಗಳನ್ನು ಬಲಿತೆಗೆದುಕೊಂಡ ಮೇಲೆ ಬಿಬಿಎಂಪಿ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡಂತಿದೆ.ಡಿಸಿಎಂ ಡಿ.ಕೆ ಶಿವಕುಮಾರ್ ಬಿಬಿಎಂಪಿ ಆಡಳಿತವನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರಿಂದ ಅಲರ್ಟ್ ಆದಂತಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಅಕ್ರಮ ಕಟ್ಟಡಗಳ ಮಾಲೀಕರ ವಿರುದ್ಧ ಸಮರ ಸಾರಿದಂತೆ ಕಾಣುತ್ತಿದೆ.ಇದರ ಭಾಗವಾಗಿಯೇ ನಿರ್ಮಾಣ ಹಂತದಲ್ಲಿರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ಧರಾಶಹಿಗೊಳಿಸುವ ಕಠಿಣ ನಿರ್ದಾರಕ್ಕೆ ಬಂದಿದ್ದಾರೆ.ಈ ಹಿನ್ನಲೆಯಲ್ಲಿ ಕಟ್ಟಡಗಳನ್ನು ಪತ್ತೆ ಮಾಡುವ ಕಾರ್ಯಕ್ಕೆ ಸೋಮವಾರದಿಂದಲೇ ಚಾಲನೆ ನೀಡೊಕ್ಕೆ ನಿರ್ದರಿಸಿರುವುದಾಗಿ ಮಾದ್ಯಮಗಳಿಗೆ ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಮೊದಲು ನಿಲ್ಲಿಸುತ್ತೇವೆ.ಬಿ ಖಾತಾದ ಕಟ್ಟಡಗಳಿಗೂ ಇದು ಅನ್ವಯವಾಗಲಿದೆ.ಯಾವುದೇ ಮುಲಾಜಿಲ್ಲದೆ ಡೆಮಾಲಿಷನ್ ಆರ್ಡರ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ವೆ ಕಾರ್ಯಕ್ಕೆ 70 ಇದಕ್ಕಾಗಿ ಕಂದಾಯ ವಿಭಾಗದ 70 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ.ಅವರು ಅಕ್ರಮ ಕಟ್ಟಡಗಳ ಫೋಟೋಗಳನ್ನು ತೆಗೆದು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಿದ್ದಾರೆ.

ರಾಜಧಾನಿಯಲ್ಲಿವೆ 700ಕ್ಕೂ ಹೆಚ್ಚು ಶಿಥಿಲ ಕಟ್ಟಡಗಳು: ಧರಾಶಹಿ ಹಂತದಲ್ಲಿ  ಸಾಕಷ್ಟು  ಶಿಥಿಲ ಕಟ್ಟಡಗಳು ಇರುವುದು ಗೊತ್ತಾಗಿದೆ.ಬಿಬಿಎಂಪಿನೇ ಸರ್ವೆ ಮಾಡಿದ ಪ್ರಕಾರ  ರಾಜಧಾನಿ ಬೆಂಗಳೂರಲ್ಲಿ 700 ಶಿಥಿಲಾವಸ್ಥೆ ಕಟ್ಟಡಗಳಿವೆ.ಅವುಗಳ ತೆರವಿಗೂ ಕಾರ್ಯಯೋಜನೆ ರೂಪಿಸಲಾಗಿದೆ.ಸಾಕಷ್ಟು ಕಟ್ಟಡಗಳು ಸರ್ಕಾರಿ ಸ್ವಾಮ್ಯದ್ದಾಗಿದ್ದು ಅವುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಸ್ಥಳಾಂತರ ಮಾಡಿ ಕಟ್ಟಡ ಗಳನ್ನು ಧರಾಶಹಿಗೊಳಿಸಲು ನಿರ್ದರಿಸಲಾಗಿದೆ.ಬಿಬಿಎಂಪಿ ಶಾಲೆಗಳು ಕೂಡ ಶಿಥಿಲಗೊಂಡಿದ್ದು ಅವುಗಳ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

1712 ಒತ್ತುವರಿ ಕಟ್ಟಡಗಳಿಗೆ ಕಾದಿದೆ ಗ್ರಹಚಾರ: ಕೆರೆ-ಕಾಲುವೆ- ಒತ್ತುವರಿ ಸಂಬಂಧ ಕಂದಾಯ ವಿಭಾಗದಿಂದ ಸರ್ವೆ ಮಾಡಲಾಗಿದೆ.ಈ ಪೈಕಿ  1712 ಕಟ್ಟಡಗಳನ್ನು ಮಾರ್ಕ್ ಮಾಡಲಾಗಿದೆ. ಆ ಪೈಕಿ 200 ರಷ್ಟು ಕಟ್ಟಡಗಳ ಒತ್ತುವರಿ ತೆರವು ಮಾಡಿದ್ದೇವೆ.ಉಳಿದ 1500 ಕಟ್ಟಡಗಳಿಗೆ ವಿಶೇಷ ಜಿಲ್ಲಾಧಿಕಾರಿಗಳು ನೊಟೀಸ್ ಜಾರಿ ಮಾಡಲಿದ್ದಾರೆ.ಒತ್ತುವರಿ ಮಾಡಲ್ಪಟ್ಟ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುವು ದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna