ಚಿಕ್ಕೋಡಿ :–
ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ ಪ್ರಸಾದ ಹನಿಮನಾಳ ಆಯ್ಕೆ
ಜಗತ್ತಿನ ಅತೀದೊಡ್ಡ ವಿದ್ಯಾರ್ಥಿ ಸಂಘಟನೆ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕದ ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ ಪ್ರಸಾದ ಹನಿಮನಾಳ ಆಯ್ಕೆಯಾಗಿದ್ದಾರೆ. ಈ ಹಿಂದೆ ಚಿಕ್ಕೋಡಿ ತಾಲೂಕ ಸಂಚಾಲಕರಾಗಿ , ಜಿಲ್ಲಾ ಸಂಚಾಲಕರಾಗಿ , ಬೆಳಗಾವಿ ವಿಭಾಗ ಸಹ ಸಂಚಾಲಕರಾಗಿ , ಬೆಳಗಾವಿ ವಿಭಾಗ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿ , ಕಲಬುರ್ಗಿಯಲ್ಲಿ ನಡೆದ ಎಬಿವಿಪಿ ಯ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರ ನೇಮಕಕ್ಕೆ ಎಬಿವಿಪಿ ಸಂಘಟನೆ ಪದಾಧಿಕಾರಿಗಳು ಚಿಕ್ಕೋಡಿ ಜಿಲ್ಲೆಯ ಹಾಗೂ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.