ತ್ಯಾಗವೀರ ಶಿರಸಂಗಿ ಲಿಂಗರಾಜರ ೧೬೪ನೇಯ ಜಯಂತಿ
ಚಿಕ್ಕೋಡಿ :–
ಸ್ಥಳಿಯ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಕೋರೆ ಪಾಲಿಟೆಕ್ನಿಕ್ ಸಭಾಭವನದಲ್ಲಿ ಕೆ.ಎಲ್.ಇ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ೧೬೪ನೇಯ ಜಯಂತಿ ಉತ್ಸವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾದ
ಡಾ. ವಿ. ಎಸ್. ಮಾಳಿ. ನಿವೃತ್ತ ಪ್ರಾರ್ಚಾರ್ಯರು, ಬಿ, ಆರ್, ದರೂರ ಪ್ರಥಮ ದರ್ಜೆ ಕಾಲೇಜು ಹಾರೂಗೇರಿ ಇವರು ಲಿಂಗರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶಿರಸಂಗಿ ಲಿಂಗರಾಜರ ಸಮಾಜಮುಖಿ ಕಾರ್ಯಗಳ ಹಾಗೂ ತ್ಯಾಗ, ದಾನ, ದಯೆ ಹಾಗೂ ಧರ್ಮಗಳಿಂದ ಕೂಡಿದ ಜೀವನ ಚರಿತ್ರೆಯನ್ನು ಕೊಂಡಾಡುತ್ತ ಇಂದಿನ ಯುವಕರ ತಲೆಯು ಜ್ಞಾನದಿಂದ ತುಂಬಿಕೊಳ್ಳುತ್ತಿದೆ ಆದರೆ ಹೃದಯ ಮಾತ್ರ ಬರಿದಾಗುತ್ತಿದೆ, ಹೃದಯ ಶ್ರೀಮಂತಿಕೆ ಬೆಳೆಸಿಕೊಂಡು ತ್ಯಾಗ ರಾಜರಾಗಿರಿರೆಂದು ಕರೆ ಇತ್ತರು.
ಅಧ್ಯಕ್ಷಸ್ಥಾನ ವಹಿಸಿ ಸ್ಥಳಿಯ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಕಾಲೇಜಿನ ಪ್ರಾರ್ಚಾರ್ಯರರಾದ ಡಾ. ಪ್ರಸಾದ. ಬಿ. ರಾಂಪೂರೆ ಇವರು ಮಾತನಾಡುತ್ತ ಸಂಸ್ಥೆಯ ಸಪ್ತರ್ಶಿಗಳಿಂದ ಹಿಡಿದು ಶಿರಸಂಗಿ ಲಿಂಗರಾಜ, ರಾಜಾ ಲಖಮಗೌಡರು ಮುಂತಾದ ದಾಣಿಗಳನ್ನು ನೆನೆಯುತ್ತ ಸುಮಾರು ಮೂರು ದಶಕಗಳಿಂದ ಸಂಸ್ಥೆಯನ್ನು ದಕ್ಷತೆಯಿಂದ ನಡೆಸಿ ಬೆಳೆಸಿದ ಡಾ. ಪ್ರಭಾಕರ್ ಕೋರೆಯವರು ಕೆ.ಎಲ್.ಇ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆಸಲ್ಲಿಸುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ,
ಇಂತಹ ಸಂಸ್ಥೆಯಲ್ಲಿ ಸಮರ್ಥ ಹಾಗೂ ಸಚಾರಿತ್ರö್ಯವುಳ್ಳ ವಿಧ್ಯಾರ್ಥಿಗಳಾಗಲು ಕರೆ ನೀಡಿದರು. ಸಿ. ಬಿ. ಕೋರೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ದರ್ಶನಕುಮಾರ ಬಿಳ್ಳೂರ ರವರು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರಾದ ಎಮ್.ಬಿ. ನಾವಿಯವರು ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರಾದ ಕೆ. ಆರ್. ಪಾಟೀಲರವರು ಅಥಿತಿಗಳನ್ನು ಪರಿಚಯಿಸಿದರು.
ಪ್ರೊ. ಪದ್ಮಾ ಮಾಳಿ ಮತ್ತು ಪ್ರೊ. ಸಾವಿತ್ರಿ ಜಂಬಗಿ ನಿರೂಪಿಸಿದರು ಹಾಗೂ ಆಯುರ್ವೇದ ವೈದ್ಯಕೀಯ ಕಾಲೇಜನ ಡಾ. ಎಸ್. ಹೂನವಾಡರವರು ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ ಚಿಕ್ಕೋಡಿ ಅಂಗಸಂಸ್ಥೆಯ ಎಲ್ಲ ಪ್ರಾಚಾರ್ಯರು, ಸಿಬ್ಬಂಧಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.