ಚಿಕ್ಕೋಡಿ :–
“ಜಗಕೆ ಅನ್ನವ ನೀಡುವ ರೈತರಿಗೆ ಗೌರವ ಸಲ್ಲಿಸೋಣ”
ಸಂಕೇಶ್ವರ ಪಟ್ಟಣದಲ್ಲಿ ‘ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ- 2024-25’ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮಸಾಧನೆ ಮಾಡಿದ ರೈತರನ್ನು ಗೌರವಿಸುವ ಮತ್ತು ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಕನ್ನೇರಿ ಸಿದ್ದಗಿರಿ ಮಹಾಸಂಸ್ಥಾನ ಮಠದ ಪ.ಪೂ. ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ನಿಡಸೋಸಿ ಶ್ರೀ ದುರದುಂಡಿಶ್ವರ ಸಿದ್ಧಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಪ.ಪೂ. ಶ್ರೀ ನಿಜಲಿಂಗೇಶ್ವರ ಮಹಾಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಚಾಲನೆ ನೀಡಿ, ಮಾತನಾಡಿದರು.
ಬಳಿಕ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ರೈತರಿಗೆ ವಿಜಯ ಕರ್ನಾಟಕದ ವತಿಯಿಂದ ಪುರಸ್ಕಾರ ನೀಡಿ, ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಜಗವ ಹಸಿವು ನೀಗಿಸುವ ಅನ್ನದಾತರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ, ಗೌರವಿಸುತ್ತಿರುವ ವಿಜಯಕರ್ನಾಟಕ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ನಿಖಿಲ ಕತ್ತಿ, ಬೆಳಗಾವಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಚನ್ನರಾಜ ಹಟ್ಟಿಹೊಳಿ, ಹಿಡಕಲ್ ಡ್ಯಾಂ ಸಂಗಮ ಶುಗರ್ಸ ಅಧ್ಯಕ್ಷರಾದ ಶ್ರೀ ರಾಜೇಂದ್ರ ಪಾಟೀಲ, ಸಂಕೇಶ್ವರ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಸೀಮಾ ಹತನೂರಿ,ಶ್ರೀ ಶಿವನಗೌಡ ಪಾಟೀಲ,ಮಹಾಂತೇಶ ಮುರಗೋಡ,ಸ್ಥಳೀಯ ಮುಖಂಡರು,ರೈತರು ಉಪಸ್ಥಿತರಿದ್ದರು.