ನಿಪ್ಪಾಣಿ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಿ ಅವರು ತಮ್ಮ ಧರ್ಮಪತ್ನಿ ರಮಾಬಾಯಿ ಅವರೊಂದಿಗೆ ಆಗಮಿಸಿದ 100 ವರ್ಷಗಳ ಪೂರೈಸುತ್ತಿರುವ ಹಿನ್ನಲೆ ಸಭೆ


ನಿಪ್ಪಾಣಿ :–

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಿ ಅವರು ನಿಪ್ಪಾಣಿಗೆ ಆಗಮಿಸಿದ ನೂರು ವರ್ಷದ ಸವಿನೆನಪಿನ ಸಂಭ್ರಮ.

ಇಂದು ನಿಪ್ಪಾಣಿ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಿ ಅವರು ತಮ್ಮ ಧರ್ಮಪತ್ನಿ ರಮಾಬಾಯಿ ಅವರೊಂದಿಗೆ ಏಪ್ರಿಲ್ 11 ರಂದು 100 ವರ್ಷಗಳ ಪೂರೈಸುತ್ತಿರುವ ಹಿನ್ನಲೆ,

ಸಮಾಜದ ಮುಖಂಡರೊಂದಿಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಅಂಬೇಡ್ಕರ ಜಿ ಅವರು ತಮ್ಮ ಪತ್ನಿಯೊಂದಿಗೆ
ಬಂದು ನಿಪ್ಪಾಣಿ ನಗರದಲ್ಲಿ 2 ದಿನ ವಸತಿ ಮಾಡಿದ್ದು ಅಭೂತಪೂರ್ವ ಕ್ಷಣವಾಗಿದೆ. ನಮ್ಮ ಜೀವನ ಇತಿಹಾಸದಲ್ಲಿಯೇ ಇದೊಂದು ಸುಂದರ ಕ್ಷಣವಾಗಿದ್ದು, ಅದರ ಸವಿನೆನಪಿಗಾಗಿ ನಮನ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಅಂಬೇಡ್ಕರ ಜಿ ಅವರ ನೆನಪು ಸರ್ವಕಾಲಕ್ಕೂ ಅಜರಾಮರ. ಅವರ ಹೋರಾಟದ ಹಾದಿ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರದ ಸಮಾಜದ ಮುಖಂಡರು,ಹಾಲಸಿದ್ದನಾಥ ಹಾಗೂ ಹಿರಾ ಶುಗರ ಸಕ್ಕರೆ ಕಾರ್ಖಾನೆ ಅಧ್ಯಕ್ಷರು, ಉಪಾಧ್ಯಕ್ಷರು,
ನಿರ್ದೇಶಕ ಮಂಡಳಿ ಸದಸ್ಯರು,ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *