ಚಿಕ್ಕೋಡಿ :--
ತಾಲುಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ
ಕೊ-ಆಪ್ ಕ್ರೆಡಿಟ್ ಸೊಸೈಟಿ (ಬಹು-ರಾಜ್ಯ) ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಾದ್ಯಂತ ಒಟ್ಟು 226 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು 2024- 25 ಸಾಲಿನಲ್ಲಿ 45.35 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಗುರುವಾರ ಪಟ್ಟಣದಲ್ಲಿನ ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ
ಈ ವಿಷಯ ತಿಳಿಸಿದ ಅವರು, ಸೊಸೈಟಿಯ ಒಟ್ಟು 226ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು 4,08,233 ಸದಸ್ಯರನ್ನು ಹೊಂದಿದೆ. 34.92 ಕೋಟಿ ರೂ ಶೇರು ಬಂಡವಾಳ ಹೊಂದಿದೆ, ಮೀಸಲು ಮತ್ತು ಇತರ ನಿಧಿಗಳು 200,93 ಕೋಟಿ ರೂಪಾಯಿ ಗಳು 4338.58 ಕೋಟಿ ಠೇವು, 3313.79 ಕೋಟಿ ರೂ. ಸಾಲ ವಿತರಿಸಿದ್ದು ಒಟ್ಟು 45.35 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 5030.90
ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಹೇಳಿದರು.
--:ಶಾಖೆಗಳು:--
ಬೆಳಗಾವಿ-84, ಬಾಗಲಕೋಟೆ-12, ಹಾವೇರಿ-09, ಬೆಂಗಳೂರು-10, ವಿಜಯಪುರ-08, ಶಿವಮೊಗ್ಗಾ-06. ಗದಗ-05, -03, ವಿಜಯನಗರ-04, ಉಡುಪಿ-03, ಧಾರವಾಡ-05, ಬಿದರ-05, ಬಳ್ಳಾರಿ-03, ಕಲಬುರ್ಗಿ-02, ದಾವಣಗೆರೆ-04, ಕೊಪ್ಪಳ-03, ತುಮಕೂರ-03, ರಾಯಚೂರ-14, ಚಿಕ್ಕಮಗಳೂರು-01, ಮೈಸೂರ-01,
ಮಂಗಳೂರು ಜಿಲ್ಲೆಯಲ್ಲಿ 01. ಮಹಾರಾಷ್ಟ್ರದ ಸಾಂಗಲಿ-೧೫, ಕೊಲ್ಲಾಪುರ-34, ಸೊಲ್ಲಾಪುರ ಜಿಲ್ಲೆಯಲ್ಲಿ 03, ಗೋವಾ ರಾಜ್ಯದಲ್ಲಿ 04 ಹೀಗೆ ಒಟ್ಟು 226 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು ಎಲ್ಲ ಶಾಖೆಗಳು ಲಾಭದಲ್ಲಿದೆ ಎಂದು ತಿಳಿಸಿದರು.
ಸಹ ಸಂಸ್ಥಾಪಕಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಸಂಸ್ಥೆಯ ಸಂಚಾಲಕರು, ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಇಷ್ಟು
ಸಂಸ್ಥೆಯು ಗ್ರಾಮೀಣ ಪ್ರದೇಶದ
ಜನಸಾಮಾನ್ಯರ ಆರ್ಥಿಕ ಸಬಲೀಕ ರಣ ಸಾಧಿಸುವ ಜೊತೆಗೆ ಪ್ರತಿವರ್ಷ ಪ್ರಗತಿಯತ್ತ ಸಾಗುತ್ತಿದ್ದು ಬರುವ ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ನೂತನ ಶಾಖೆ ಪ್ರಾರಂಭಿಸಲಿದೆ. ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ ರೈತರ, ಜನಸಾಮಾನ್ಯರ, ಸಮೃದ್ಧಿಗೆ ಶ್ರಮಿಸುವುದೇ ಸಂಸ್ಥೆಯ ಮೂಲ ಉದ್ದೇಶವಾಗಿದೆ
ಲಾಭಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಆನಂದ ಪಾಟೀಲ, ಸಂಚಾಲಕ, ಪ್ರಧಾನ ವ್ಯವಸ್ಥಾಪಕ ಬಿ.ಎ. ಗುರವ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.





