ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಂದೆ-ತಾಯಿ ನಮ್ಮನ್ನು ಹೋತ್ತು ಹೆತ್ತು ಜನ್ಮ ನೀಡಿ ಬದುಕಿಸಿದರೆ ಮಾನವ ಜನ್ಮ ಸಾರ್ಥಕತೆ ಮಾಡಿಕೊಳ್ಳುಲು ಸದ್ಗುರುಗಳು ನಮಗೆ ಮೋಕ್ಷದ ದಾರಿಯನ್ನು ತೋರಿಸಿದವರು. ಅಂತಹ ಗುರುವಿನ ಮೇಲೆ ಅಂತರಗಂಗದಿಂದ ಭಕ್ತಿ ಇಟ್ಟು ಅವರ ಮಾರ್ಗದಲ್ಲಿ ನಡೆದು ಗುರು-ಶಿಷ್ಯರ ಸಂಬಂಧ ಅಮೃತಮಯವಾಗಿದ್ದಾಗ ಜೀವನದುದ್ದಕ್ಕು ಸ್ವಚ್ಛಂದ ಆನಂದದ ಜೀವನ ಸವಿಯಲು ಗುರು ಮಾರ್ಗದಲ್ಲಿ ದುಡಿದು ಧನ್ಯರಾಗಬೇಕೆಂದು ಶಿರಗೂರದ ಕಲ್ಮೇಶ್ವರ ಆಶ್ರಮದ ಸದ್ಗುರು ಅಭಿನವ ಕಲ್ಮೇಶ್ವರ ಮಹಾರಾಜರು ಸದ್ಭಕ್ತರಿಗೆ ಕರೆ ನೀಡಿದರು. ಅವರು ಕಳೆದ ದಿನಾಂಕ 02 ಜುಲೈ 2023 ರಂದು ಸದ್ಗುರು ಶರಣ ಸೇವಾ ಮಂಡಳ, ಧುಳಗನವಾಡಿ ಅಪ್ಪಾಸಾಹೇಬ ಖೋತ ಪರಿವಾರದ ಸಹಯೋಗದಲ್ಲಿ ನಡೆದುಕೊಂಡು ಬಂದ 82ನೇ ಸತ್ಸಂಗ ಚಿಂತನಗೋಷ್ಠಿ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಶರಣ ಶ್ರೀ ಕೇರೂರದ ಕೇದಾರಿಗೌಡಾ ಪಾಟೀಲ ಇವರು ಗುರುನಾಥ ನಿನ್ನುಪಕಾರ ಯಾತರಿಂದಲೇ ತಿರಿಸಲಿ ವಿಷಯದ ಮೇಲೆ ಪ್ರವಚನ ನಿರೂಪಿಸಿ ನಮ್ಮ ಮಸ್ತಕದಲ್ಲಿನ ಅಜ್ಞಾನ ಅಂದಕಾರ ಕಸವನ್ನು ತೆಗೆದು ಜ್ಞಾನದ ಮಾಗದಿಂದ ಸದ್ಗುರುಗಳು ಅಮೃತ ಚಿಂತನ ನೀಡುವರು ಶಸ್ತ್ರ ಪ್ರವಚನ ಕೇಳುವುದರಿಂದ ನಮ್ಮ ಮನಸ್ಸು ದೇವನ ಕಡೆಗೆ ಒಲಿಯುತ್ತದೆ ಆಡಂಬರದ ಜೀವನ ಬಿಟ್ಟು ಸಂತ ಶರಣರ ದಶನ ಪಡೆದು ಪಾರಮಾಥದಲ್ಲಿ ಪರಮಾನಂದ ಸವಿಯಬೇಕೇಂದರು.
ವೇದಿಕೆಯ ಮೇಲೆ ಮಾತೋಶ್ರೀ ಸಾವಿತ್ರಮ್ಮ ವಿಜಯನಗರೆ, ರಾವಣ್ಣ ಖೋತ, ಕಲ್ಲಪ್ಪಾ ಜನವಾಡೆ ಬೆನಾಡಿ, ರಾವಣ್ಣಾ ಖೋತ, ಧನಪಾಲ ಕಮತೆ, ಭೀಮಪ್ಪಾ ಕಮತೆ, ಸಿದ್ದಪ್ಪಾ ಖೋತ, ಅಪ್ಪಾಸಾಹೇಬ ಖೋತ ಉಪಸ್ಥಿತರಿದ್ದರು. ಸಮೃದ್ಧಿ ಕಲಾಸಂಗಮ ಸೇವಾ ಸಂಘ, ಬೋರಗಲ್ ಹಾಗೂ ವಿವಿಧ ಕಲಾವಿದರು ಸಂಗೀತ ಭಜನಾ ಸೇವೆ ನಡೆಸಿಕೊಟ್ಟರು. ಯುವ ಪ್ರತಿಭಾವಂತ ಚಿತ್ರಕಲಾವಿದ ನಾಗರಾಜ ಮಾಲಗತ್ತೆ ಬೇಡಕಿಹಾಳ ಇವರಿಗೆ ಶಾಲು ಸ್ಮರಣಿಕೆ ಯೊಂದಿಗೆ ಗೌರವಿಸಲಾಯಿತು.
ಸುಪ್ರೀಯಾ ಕಲಾಚಂದ್ರ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಭರತ ಕಲಾಚಂದ್ರ ಸ್ವಾಗತಿಸಿದರು. ಸುಜಾತಾ ಮಗದುಮ್ಮ ನಿರೂಪಿಸಿದರು. ಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
+ There are no comments
Add yours