ಚಿಕ್ಕೋಡಿ ಪಟ್ಟಣದಲ್ಲಿ ಭ.ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಅದ್ಧುರಿಯಾಗಿ ಜರುಗಿತು

ಚಿಕ್ಕೋಡಿ

ಪಟ್ಟಣದಲ್ಲಿ ಭ.ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಅದ್ಧುರಿಯಾಗಿ ಜರುಗಿತು.
ಜಗತ್ತಿಗೆ ಅಹಿಂಸಾ ಮತ್ತು ತ್ಯಾಗದ ಮಾರ್ಗವನ್ನು ತೋರಿಸಿರುವ ಜೈನ ಧರ್ಮದ 24 ನೇ ತಿರ್ಥಂಕರರಾದ ಭ.ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವವು ಪಟ್ಟಣದಲ್ಲಿ ಅತೀ ವಿಜ್ರಂಭನೆಯಿಂದ ಜರುಗಿತು,

ಪಟ್ಟಣದ ಜೈನ್ ಪೇಠೆಯ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಅಭಿಷೇಕ ಪೂಜಾ ವಿಧಾನಗಳು ಜರುಗಿದವು, ಅಲ್ಲಿಂದ ಪಲ್ಲಕ್ಕಿ ಮೆರವಣಿಗೆ, ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಹಾವೀರ ನಗರ, ಮಹಾವೀರ ವೃತ್ತ, ಕೆ.ಸಿ‌,ರಸ್ತೆ ಮತ್ತು ಹೊಸಪೇಠ ಗಲ್ಲಿಯ ಮಂದಿರಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ಸಂಜೆ ವಿವಿಧ ಮನರಂಜನೆ ಕಾರ್ಯಗಳು ಜರುಗಿದವು.

ಈ ಸಂಧರ್ಭದಲ್ಲಿ ವರ್ಧಮಾನ ಸದಲಗೆ, ಡಾ.ಪದ್ಮರಾಜ ಪಾಟೀಲ, ಎಸ್.ಟಿ‌.ಮುನ್ನೋಳಿ, ಚಂದ್ರಕಾಂತ ಹುಕ್ಕೇರಿ, ರಾಮಚಂದ್ರ ಚೌಗುಲೆ, ಬಾಹುಬಲಿ ನಸಲಾಪುರೆ, ದರ್ಶನ ಉಪಾಧ್ಯೆ, ಶೀತಲ ಹಜಾರೆ, ಡಾ. ಸಂಜಯ ಪಾಟೀಲ, ಮಹೇಂದ್ರಕುಮಾರ ಶಹಾ, ರಾಜು ಬಡಬಡೆ, ಯಶವಂತ ಮಿರಜಿ, ಸಾಗರ ಪಲಸೆ, ಪಾರ್ಶ್ವನಾಥ ಮಾಂಗುರೆ, ಡಾ.ಪಿ.ಜಿ.ಕೆಂಪಣ್ಣವರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ದಿಗಂಬರ ಮತ್ತು ಸ್ವೈತಾಂಬರ ಜೈನ್ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *